ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ | ಭಾರತದ ಗಡಿಭಾಗದಲ್ಲಿ ನೇಪಾಳ ಪೊಲೀಸರಿಂದ ಗುಂಡು ಹಾರಾಟ; ವ್ಯಕ್ತಿ ಸಾವು

Last Updated 12 ಜೂನ್ 2020, 10:23 IST
ಅಕ್ಷರ ಗಾತ್ರ

ಸೀತಾಮರ್ಹಿ: ಭಾರತ ಮತ್ತು ನೇಪಾಳ ಗಡಿಭಾಗವಾದ ಬಿಹಾರದ ಸೀತಾಮರ್ಹಿಯಲ್ಲಿ ಶುಕ್ರವಾರ ನೇಪಾಳ ಪೊಲೀಸರು ಗುಂಡು ಹಾರಿಸಿದ್ದು, ಓರ್ವ ಭಾರತೀಯ ನಾಗರಿಕ ಸಾವಿಗೀಡಾಗಿದ್ದಾರೆ. ಇಬ್ಬರಿಗೆ ಗಾಯಗಳಾಗಿವೆ.

ಸೊಮೇಬರ್ಷಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಮೊಹೊಬಾ ಗ್ರಾಮದ ಲಾಲ್‌ಬಂಧಿ- ಜಾನ್ಕಿ ನಗರ್ ಗಡಿಭಾಗದಲ್ಲಿ ಈ ಘಟನೆ ನಡೆದಿದೆ. ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು ಇಬ್ಬರಿಗೆ ಗಾಯಗಳಾಗಿವೆ ಎಂದುಪಟನಾದ ಸಶಸ್ತ್ರ ಸೀಮಾ ಬಲ್ಐಜಿ ಸಂಜಯ್ ಕುಮಾರ್ ಹೇಳಿದ್ದಾರೆ. ನೇಪಾಳದ ಸಶಸ್ತ್ರ ಪೊಲೀಸ್ ಪಡೆ (ಎಪಿಎಫ್) ಮತ್ತು ಸ್ಥಳೀಯರ ನಡುವೆ ಈ ಜಟಾಪಟಿ ನಡೆದಿದೆ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಮಾರ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ಗಡಿಯ ಸಮೀಪವಿರುವ ಪ್ರದೇಶವನ್ನು ಪ್ರವೇಶಿಸುವ ಬಗ್ಗೆ ಸ್ಥಳೀಯರು ಎಪಿಎಫ್‌ನೊಂದಿಗೆ ಮುಖಾಮುಖಿಯಾಗಿದ್ದರು. ಆನಂತರ ಎರಡೂ ಕಡೆಯ ನಡುವೆ ಗಲಾಟೆ ನಡೆದಿದ್ದು, ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಯ ಪ್ರಕಾರ ಸ್ಥಳೀಯರು ಆಯುಧಗಳನ್ನು ಕಿತ್ತುಕೊಳ್ಳಲು ಯತ್ನಿಸಿದಾಗ ನೇಪಾಳ ಪೊಲೀಸರು ಗುಂಡು ಹಾರಿಸಿದ್ದಾರೆ. ಕೊರೊನಾವೈರಸ್ ಹರಡುತ್ತಿರುವಾಗಲೇ ಮಾರ್ಚ್ 22ರಂದು ನೇಪಾಳ ಅಂತರರಾಷ್ಟ್ರೀಯ ಗಡಿಭಾಗಗಳನ್ನು ಮುಚ್ಚಿತ್ತು.


According to the SP, the Nepal police have claimed that they opened fire after a tried to snatch their weapons.

Nepal had closed its international borders on March 22 due to coronavirus pandemic.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT