ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಸೋಂಕಿತ ವ್ಯಕ್ತಿ ಅಪ್ಪಿಕೊಂಡ 10 ವರ್ಷದ ಬಾಲಕನಿಗೆ ಕೋವಿಡ್‌-19 ದೃಢ

Last Updated 31 ಮಾರ್ಚ್ 2020, 13:27 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ 10 ವರ್ಷದ ಬಾಲಕನೊಬ್ಬನಿಗೆ ಮಂಗಳವಾರ ಕೋವಿಡ್‌–19 ರೋಗದೃಢಪಟ್ಟಿದೆ. 'ಕೊರೊನಾ ವೈರಸ್ಸೋಂಕಿತ ವ್ಯಕ್ತಿಯೊಬ್ಬರು ಬಾಲಕನನ್ನು ಅಪ್ಪಿಕೊಂಡ ಪರಿಣಾಮ ಸೋಂಕು ತಗುಲಿದೆ' ಎಂದು ಎಸ್‌ಕೆಐಎಂಎಸ್‌ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಶ್ರೀನಗರ ಈದ್ಗಾ ಪ್ರದೇಶದ 10 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಆದರೆ ಈ ಬಾಲಕನಿಗೆ ಯಾವುದೇ ಪ್ರವಾಸದ ಹಿನ್ನೆಲೆ ಇಲ್ಲ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ಆರು ಮಂದಿಗೆ ಕೋವಿಡ್‌ ದೃಢಪಟ್ಟಿದೆ.ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರದ ವಕ್ತಾರ ರೋಹಿತ್‌ ಕನ್ಸಲ್‌ ತಿಳಿಸಿದ್ದಾರೆ.

ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರೊಬ್ಬರಿಗೆ ಸೋಮವಾರ ಸೋಂಕು ದೃಢಪಟ್ಟಿದ್ದು, ಸೋಂಕಿತ ವೈದ್ಯ ಹಾಗೂ ಆತನ ಕುಟುಂಬವನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಸೋಂಕಿತ ವೈದ್ಯರಿಗೆ ವಿದೇಶದಿಂದ ಬಂದವರ ಸಂಪರ್ಕದಿಂದ ಹಾಗೂ ಕಾಲೇಜಿನಲ್ಲಿ ಸೋಂಕು ತಗುಲಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಕೋವಿಡ್‌ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಮ್ಮು ಮತ್ತು ಕಾಶ್ಮೀರ– ಪಂಜಾಬ್‌ ರಾಜ್ಯವನ್ನು ಸಂಪರ್ಕಿಸುವ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದ್ದು, ಲಖನ್‌ಪುರ ಬಳಿ ರಸ್ತೆ ಬಂದ್‌ ಮಾಡಲಾಗಿದೆ ಎಂದು ಕತುವಾ ಜಿಲ್ಲಾಧಿಕಾರಿ ಒ.ಪಿ.ಭಗತ್‌ ತಿಳಿಸಿದ್ದಾರೆ.

ದೇಶದಾದ್ಯಂತ ಲಾಕ್‌ಡೌನ್‌ ಆದ ಪರಿಣಾಮ ಲಖನ್‌ಪುರ ಮಾರ್ಗವಾಗಿ ವಿವಿಧ ರಾಜ್ಯಗಳಿಂದ ಸುಮಾರು 5,600 ಜನರು ಈವರೆಗೆ ಕಣಿವೆ ಪ್ರದೇಶವನ್ನು ತಲುಪಿದ್ದಾರೆ. ಅವರಲ್ಲಿ ಕತುವಾ ಜಿಲ್ಲೆಗೆ ಸೇರಿದ ಸುಮಾರು 3,000 ಜನ ಹಾಗೂ ಸಾಂಬಾ ಜಿಲ್ಲೆಗೆ ಸೇರಿದ 2,600 ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT