ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈಯಲ್ಲಿ ಕಟ್ಟಡ ಕುಸಿತ: 4 ಸಾವು, ಅವಶೇಷಗಳಡಿಯಲ್ಲಿ 40 ಮಂದಿ ಸಿಲುಕಿರುವ ಶಂಕೆ

Last Updated 16 ಜುಲೈ 2019, 16:49 IST
ಅಕ್ಷರ ಗಾತ್ರ

ಮುಂಬೈ: ದಕ್ಷಿಣ ಮುಂಬೈನ ಡೋಂಗ್ರಿ ಪ್ರದೇಶದಲ್ಲಿ ಮಂಗಳವಾರ ಶತಮಾನದಷ್ಟು ಹಳೆಯ ನಾಲ್ಕು ಅಂತಸ್ತಿನ ‘ಕೇಸರ್‌ಬಾಯಿ’ ಕಟ್ಟಡ ಕುಸಿದು, 4 ಮಂದಿ ಮೃತಪಟ್ಟಿದ್ದಾರೆ. 40ರಿಂದ 50 ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕಟ್ಟಡದಲ್ಲಿ ಸುಮಾರು 15 ಕುಟುಂಬಗಳು ವಾಸ ಮಾಡುತ್ತಿದ್ದವು.

ಸ್ಥಳೀಯರು ಮಾನವ ಸರಪಳಿ ನಿರ್ಮಿಸಿ, ಕಟ್ಟಡದ ಕಲ್ಲುಗಳನ್ನು ಎತ್ತಿ ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಲು ಮುಂದಾದರು.

ಮಾಲೀಕತ್ವ ಗೊಂದಲ: ಕುಸಿದ ಕಟ್ಟಡದ ಮಾಲೀಕತ್ವದ ಕುರಿತು ಗೊಂದಲ ಸೃಷ್ಟಿಯಾಗಿದೆ. ‘ಕೇಸರ್‌ಬಾಯಿ ಕಟ್ಟಡ ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಮಹಾರಾಷ್ಟ್ರ ವಸತಿ ಹಾಗೂ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ದುರಸ್ತಿ ವಿಭಾಗದ ಮುಖ್ಯಸ್ಥ ವಿನೋದ್‌ ಘೋಸಲ್ಕರ್‌ ಹೇಳಿದರು.

‘ಕಟ್ಟಡವು ಹಳೆಯದಾಗಿದ್ದು, ಶಿಥಿಲಗೊಂಡಿತ್ತು. ಇದನ್ನು ದುರಸ್ತಿ ಮಾಡಿಸಿ ಎಂದು ಅಲ್ಲಿನ ನಿವಾಸಿಗಳು ಮಹಾರಾಷ್ಟ್ರ ವಸತಿ ಹಾಗೂ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡುತ್ತಲೇ ಇದ್ದರು. ಆದರೆ, ಪ್ರಾಧಿಕಾರದ ಅಧಿಕಾರಿಯೊಬ್ಬರು ಕಟ್ಟಡ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ’ ಎಂದು ಕಾಂಗ್ರೆಸ್‌ಶಾಸಕ ಬಾಯಿ ಜಗಪತ್‌ ಆರೋಪಿಸಿದರು.

ರಕ್ಷಣಾ ಕಾರ್ಯಕ್ಕೆ ತೊಡಕು

ಕೇಸರ್‌ಬಾಯಿ ಕಟ್ಟಡವು ಜನನಿಬಿಡ ಪ್ರದೇಶದಲ್ಲಿದೆ. ಅಲ್ಲಿನ ರಸ್ತೆಗಳೂ ಕಿರಿದಾಗಿವೆ. ಆದ್ದರಿಂದ ಆಗ್ನಿ ಶಾಮಕದಳ, ಮುಂಬೈ ಪೊಲೀಸ್‌ ಹಾಗೂ ಅಧಿಕಾರಿಗಳು ಸ್ಥಳಕ್ಕೆ ತಲುಪಲು ಹರಸಾಹಸ ಪಡಬೇಕಾಯಿತು. ಇದು ರಕ್ಷಣಾ ಕಾರ್ಯಕ್ಕೆ ಸ್ವಲ್ಪ ತೊಡಕುಂಟು ಮಾಡಿತು.

ಕಿರಿದಾದ ರಸ್ತೆಯಿಂದಾಗಿ ಘಟನಾ ಸ್ಥಳದಿಂದ 50 ಮೀಟರ್‌ ದೂರದಲ್ಲೇ ಆಂಬುಲೆನ್ಸ್‌ ಅನ್ನು ನಿಲ್ಲಿಸಬೇಕಾಯಿತು.

ಘಟನಾಸ್ಥಳದಲ್ಲಿ ನೂರಾರು ಮಂದಿ ಸೇರಿದ್ದರಿಂದ ತೊಂದರೆ ಹೆಚ್ಚಿತ್ತು. ರಕ್ಷಣಾ ಕಾರ್ಯಕ್ಕೆ ಬಳಸುವ ಯಂತ್ರಗಳನ್ನೂ ಸ್ಥಳಕ್ಕೆ ಕೊಂಡೊಯ್ಯಲು ಸಾಧ್ಯವಾಗದ ಕಾರಣ, ರಕ್ಷಣಾ ಸಿಬ್ಬಂದಿಯೇ ಶೋಧಕಾರ್ಯ ನಡೆಸಿದರು.

ನಮಗೆ ಜೋರಾಗಿ ಸದ್ದು ಕೇಳಿಸಿತು.ಕಟ್ಟಡ ಕುಸಿದು ಬೀಳುತ್ತಿದೆ ಎಂದು ಎಲ್ಲರೂ ಜೋರಾಗಿ ಕೂಗುತ್ತಿದ್ದರು. ನಾನು ಓಡಿದೆ.ದೊಡ್ಡ ಮಟ್ಟದಲ್ಲಿ ಭೂಕಂಪನ ಸಂಭವಿಸಿದಂತಾಗಿತ್ತು ಎಂದು ಎನ್‌ಡಿಟಿವಿ ಜತೆ ಮಾತನಾಡಿದ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

***

ಅವಶೇಷಗಳಡಿ ಸಿಲುಕಿರುವ ಜೀವಗಳ ರಕ್ಷಣೆಯೇ ನಮ್ಮ ಆದ್ಯತೆ

–ರಾಧಾಕೃಷ್ಣ ವಿಖೆ ಪಾಟೀಲ್‌, ವಸತಿ ಸಚಿವ, ಮಹಾರಾಷ್ಟ್ರ

ಘಟನೆಯಿಂದ ದುಃಖವಾಗಿದೆ. ಅವಘಡದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಗೊಂಡವರು ಬೇಗ ಗುಣಮುಖರಾಗಲಿ

–ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT