7

ದೆಹಲಿ: ಕಣ್ಣು ಕಟ್ಟಿ, ನೇಣು ಹಾಕಿದ ಸ್ಥಿತಿಯಲ್ಲಿ ಕುಟುಂಬದ 11 ಮಂದಿ

Published:
Updated:
ಒಂದೇ ಕುಟುಂಬದ 11 ಮಂದಿ ನೇಣು ಹಾಕಿಕೊಂಡು ಸಾವಿಗೀಡಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ

ನವದೆಹಲಿ: ಒಂದೇ ಕುಟುಂಬದ 11 ಮಂದಿ ಕಣ್ಣು ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಉತ್ತರ ದೆಹಲಿಯ ಸಂತ್ ನಗರದಲ್ಲಿರುವ ನಿವಾಸವೊಂದರಲ್ಲಿ ಭಾನುವಾರ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ನಾಲ್ವರು ಪುರುಷರು, ಮೂವರು ಮಹಿಳೆಯರು ಹಾಗೂ ನಾಲ್ವರು ಹುಡುಗಿಯರು ಕಬ್ಬಿಣದ ಸರಳುಗಳಿಗೆ ನೇಣು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಎಲ್ಲರ ಕಣ್ಣುಗಳಿಗೂ ಹತ್ತಿ ಮತ್ತು ಬಟ್ಟೆಯಿಂದ ಕಟ್ಟಿರುವುದು ಕಂಡು ಬಂದಿದೆ. 

ಪ್ಲೇವುಡ್‌ ವ್ಯಾಪಾರ ನಡೆಸುವ ವ್ಯಕ್ತಿ ಸೇರಿ 11 ಮಂದಿ ಸಾವಿಗೀಡಾಗಿದ್ದಾರೆ. ಮನೆಯ ಬಾಗಿಲು ತೆರೆದ ಸ್ಥಿತಿಯಲ್ಲಿಯೇ ಇದ್ದು, ನೆರೆಮನೆಯವರು ಬೆಳಿಗ್ಗೆ 8ಗಂಟೆ ಸುಮಾರಿಗೆ ವಾಕಿಂಗ್‌ಗಾಗಿ ಕರೆಯಲು ಹೋದಾಗ ಸಾವಿನ ಸಂಗತಿ ಹೊರಬಂದಿದೆ. 

ಸಾವಿಗೆ ಕಾರಣ ತಿಳಿದು ಬಂದಿಲ್ಲ, ಆತ್ಮಹತ್ಯೆಗೆ ಸಂಬಂಧಿಸಿದ ಯಾವುದೇ ಪತ್ರ ಸಹ ದೊರೆತಿಲ್ಲ ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !