ಬುಧವಾರ, ಫೆಬ್ರವರಿ 19, 2020
18 °C

₹12 ಕೋಟಿ ಲಾಟರಿ ಗೆದ್ದ ದಿನಗೂಲಿ ಕಾರ್ಮಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಹಲವು ಜನರ ಭವಿಷ್ಯವನ್ನೇ ಬದಲಿಸಿರುವ ಕೇರಳ ರಾಜ್ಯ ಲಾಟರಿ, ಈ ಬಾರಿ ಕಣ್ಣೂರು ಮೂಲದ ದಿನಗೂಲಿ ನೌಕರನೊಬ್ಬನಿಗೆ ಒಲಿದಿದೆ.

ಕಣ್ಣೂರು ನಗರದಿಂದ 40 ಕಿ.ಮೀ. ದೂರದಲ್ಲಿರುವ ಮಾಲೂರಿನ ಪೆರುನನ್‌ ರಾಜನ್‌ ಕ್ರಿಸ್‌ಮಸ್‌–ಹೊಸವರ್ಷದ ಬಂಪರ್‌ ಲಾಟರಿಯಲ್ಲಿ ₹12 ಕೋಟಿ ಗೆದ್ದುಕೊಂಡಿದ್ದು, ತೆರಿಗೆ ಕಡಿತದ ಬಳಿಕ ಅಂದಾಜು ₹7 ಕೋಟಿ ರಾಜನ್‌ ಕೈಸೇರಲಿದೆ. 58 ವರ್ಷದ ರಾಜನ್‌ ಆರ್ಥಿಕ ಸಂಕಷ್ಟದಲ್ಲಿರುವ ವೇಳೆಯೇ ಅದೃಷ್ಟ ಒಲಿದಿದೆ. ಇಬ್ಬರು ಹೆಣ್ಣುಮಕ್ಕಳ ಪೈಕಿ ಹಿರಿಯ ಮಗಳಿಗೆ ಮದುವೆ ಮಾಡಿದ್ದ ರಾಜನ್‌, ₹5 ಲಕ್ಷಕ್ಕೂ ಮೀರಿ ಸಾಲ ಮಾಡಿದ್ದರು.

‘ನನ್ನ ಬಳಿ ಹಣವಿದ್ದಾಗ ಲಾಟರಿ ಖರೀದಿಸುತ್ತಿದ್ದೆ. ಸಾಲದ ನಡುವೆ ₹300 ನೀಡಿ ಬಂಪರ್‌ ಲಾಟರಿ ಖರೀದಿಸಿದ್ದಕ್ಕೆ ಪತ್ನಿಯೂ ಅಸಮಾಧಾನಗೊಂಡಿದ್ದಳು. ಮೊದಲು ಸಾಲ ತೀರಿಸುತ್ತೇನೆ. ಉಳಿದ ಹಣವನ್ನು ಏನು ಮಾಡಬೇಕೆಂದು ಇನ್ನೂ ಯೋಚಿಸಿಲ್ಲ’ ಎಂದು ರಾಜನ್‌ ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು