ಬುಧವಾರ, ಅಕ್ಟೋಬರ್ 16, 2019
21 °C

ಗುಂಪು ಗಲಭೆ ತಡೆಗೆ ಮುಂದಾದ ಪೊಲೀಸರ ಮೇಲೆಯೇ ಹಲ್ಲೆ

Published:
Updated:

ಹೈಲಖಾಂಡ್ (ಅಸ್ಸಾಂ): ದಕ್ಷಿಣ ಅಸ್ಸಾಂನ ಹೈಲ್‌ಖಾಂಡ್‌ ಜಿಲ್ಲೆಯನಿತೈ ನಗರ ಗ್ರಾಮದಲ್ಲಿ ನಾಲ್ವರನ್ನು ಗುಂಪು ಹಲ್ಲೆಯಿಂದ ರಕ್ಷಿಸಲು ಮುಂದಾಗಿದ್ದ 12 ಪೊಲೀಸರು ಮತ್ತು ಹಲವು ಗ್ರಾಮಸ್ಥರು ಗಾಯಗೊಂಡಿದ್ದಾರೆ. ಆಕ್ರೋಶಗೊಂಡಿದ್ದ ಗುಂಪು ಇವರ ಮೇಲೆ ದಾಳಿ ಮಾಡಿತ್ತು.

ಶುಕ್ರವಾರ ರಾತ್ರಿ ನಡೆದ ಘಟನೆಯಲ್ಲಿ ಸಿಆರ್‌ಪಿಎಫ್‌ನ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಡಿಗೆಗಳಿಂದ ಭದ್ರತಾ ಸಿಬ್ಬಂದಿ ಮೇಲೆ ದಾಳಿ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.  ಮಕ್ಕಳ ಕಳ್ಳರು ಎಂದು ಶಂಕಿಸಿ ಸ್ಥಳೀಯರು ದಾಳಿ ನಡೆಸಿದ್ದರು.

Post Comments (+)