ಭಾನುವಾರ, ಆಗಸ್ಟ್ 25, 2019
23 °C

15ರ ಹರೆಯದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ

Published:
Updated:

ಪುನ್‌ಹನಾ (ಹರ್ಯಾಣ): 15ರ ಹರೆಯದ ಬಾಲಕಿಯೊಬ್ಬಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ ಪುನ್‌ಹನಾದಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಜುಲೈ 30ರಂದು ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು ಆಗಸ್ಟ್ 5ರಂದು ಪ್ರಕರಣ ದಾಖಲಾಗಿದೆ.

ಅದೇ ಗ್ರಾಮದ ಐವರು ವ್ಯಕ್ತಿಗಳು ತನ್ನ ಮಗಳನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಬಾಲಕಿಯ ಅಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಗಳವಾರ ನೂಹ್ ನ್ಯಾಯಾಲಯದಲ್ಲಿ  ಸಿಆರ್‌ಪಿಸಿ ಸೆಕ್ಷನ್ 164ರಡಿಯಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿ ಆಕೆಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ.

 ಜುಲೈ 30ರಂದು ತನ್ನ ಪರಿಚಯದ ವ್ಯಕ್ತಿಯೊಬ್ಬರು ಅಪಹರಿಸಿ ಅಜ್ಞಾತ ಸ್ಥಳವೊಂದಕ್ಕ ಕರೆದೊಯ್ದರು. ಅಲ್ಲಿ ಆ ವ್ಯಕ್ತಿ ತನ್ನ ಇಬ್ಬರು ಗೆಳೆಯರನ್ನು ಕರೆಸಿದ್ದರು. ಆಮೇಲೆ ಅವರಿಬ್ಬರು ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಈ ವಿಷಯವನ್ನು ಬಹಿರಂಗ ಪಡಿಸಬಾರದು ಎಂದು ನಾಡ ಪಿಸ್ತೂಲ್ ತೋರಿಸಿ ನನಗೆ ಬೆದರಿಕೆಯೊಡ್ಡಿದ್ದಾರೆ. ಆಮೇಲೆ ಒಂದಷ್ಟು ಜನ ಅಲ್ಲಿ ಜಮಾಯಿಸಿದರು.

ಆ ದಾರಿಯಾಗಿ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಗಳಲ್ಲಿ ಮನೆಯನವರೆಗೆ ಲಿಫ್ಟ್ ಕೊಡಿ ಎಂದು ಕೇಳಿದೆ. ಅವರೂ ನನ್ನ ಮೇಲೆ ಅತ್ಯಾಚಾರವೆಸಗಿ ಗ್ರಾಮದ ಹೊರವಲಯದಲ್ಲಿ ಬಿಟ್ಟು ಹೋದರು ಎಂದು ಬಾಲಕಿ ಹೇಳಿರುವುದಾಗ ಪುನ್‌ಹನಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಕಿರ್‌ಷನ್ ಕುಮಾರ್ ಹೇಳಿದ್ದಾರೆ.

ಜುಲೈ 31ರಂದು ಮಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ತನ್ನ ಹಳೆಯ ಮನೆ ಹತ್ತಿರ ಬಿದ್ದಿರುವುದನ್ನು ನಾನು ಕಂಡೆ ಎಂದು ಬಾಲಕಿಯ ಅಪ್ಪ ಹೇಳಿದ್ದಾರೆ. ಮೊದಲು ಆಕೆ ಮನೆಯವರಲ್ಲಿ ಏನೂ ಹೇಳಲಿಲ್ಲ. ಆದರೆ ಆಕೆಯ ಅಮ್ಮ ಪದೇ ಪದೇ ಹೇಳಲು ಒತ್ತಾಯಿಸಿದಾಗ ಬಾಲಕಿ ಅತ್ಯಾಚಾರ ಪ್ರಕರಣದ ಬಗ್ಗೆ ಹೇಳಿದ್ದಾಳೆ.  ಆದಾಗ್ಯೂ, ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಮನೆಯವರು ದೂರು ನೀಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಐಪಿಸಿ ಸೆಕ್ಷನ್ 34 (ಒಂದೇ ಉದ್ದೇಶ), 363  (ಅಪಹರಣ), 366ಎ (ಅಪ್ರಾಪ್ತೆ ಮೇಲೆ ದೌರ್ಜನ್ಯ),  506 (ಜೀವ ಬೆದರಿಕೆ) ಮತ್ತು ಸಶಸ್ತ್ರ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯಡಿಯಲ್ಲಿ ಕೇಸು ದಾಖಲಾಗಿದೆ.

ಈ ಪ್ರಕರಣವನ್ನು  ಆಗಸ್ಟ್ 7ರಂದು ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಆರೋಪಿಗಳ ವಿರುದ್ಧ ತನಿಖೆ ಮುಂದುವರಿದಿದೆ ಎಂದು ಕುಮಾರ್ ಹೇಳಿದ್ದಾರೆ.
 

Post Comments (+)