ಶನಿವಾರ, ಸೆಪ್ಟೆಂಬರ್ 26, 2020
23 °C

ಹೆಸರಿನ ಗೊಂದಲ | ಕೋವಿಡ್‌ ರೋಗಿ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

ಗುವಾಹಟಿ (ಅಸ್ಸಾಂ): ಹೆಸರಿನ ಗೊಂದಲದಿಂದಾಗಿ ಚೇತರಿಸಿಕೊಂಡ ರೋಗಿಯನ್ನು ಬಿಡುಗಡೆ ಮಾಡುವ ಬದಲು ಕೋವಿಡ್‌ ರೋಗಿಯೊಬ್ಬರನ್ನು ಮನೆಗೆ ವಾಪಸ್‌ ಕಳುಹಿಸಿದ ಘಟನೆ ದರಂಗ್ ಜಿಲ್ಲೆಯಲ್ಲಿ ನಡೆದಿದೆ. 

ಎರಡು ದಿನಗಳ ಹಿಂದೆ ಮಂಗಲದಾಯ್‌ ಸಿವಿಲ್‌ ಆಸ್ಪತ್ರೆಯಲ್ಲಿ ಚೇತರಿಸಿಕೊಂಡ 14 ಮಂದಿ ರೋಗಿಗಳ ಹೆಸರನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಸೋಂಕು ದೃಢಪಟ್ಟಿದ್ದ ವ್ಯಕ್ತಿ ಪ್ರತಿಕ್ರಿಯೆ ನೀಡಿದ್ದರಿಂದ ಅವರನ್ನೇ ಬಿಡುಗಡೆ ಮಾಡಲಾಯಿತು. ಇಬ್ಬರ ಹೆಸರು ಒಂದೇ ರೀತಿ ಇದ್ದುದ್ದರಿಂದ ಮತ್ತು ಮುಖಗವುಸು ಹಾಕಿದ್ದ ಕಾರಣ ಈ ಆಚಾತುರ್ಯ ಘಟನೆ ನಡೆಯಿತು ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.

ಕೂಡಲೇ ತಪ್ಪಿನ ಅರಿವಾಗಿ ಆಸ್ಪತ್ರೆಯವರು ಆಂಬ್ಯುಲೆನ್ಸ್‌ ಕಳುಹಿಸಿ ರೋಗಿಯನ್ನು ವಾಪಸ್‌ ಕರೆ ತಂದರು. ಈ ವ್ಯಕ್ತಿಯನ್ನು ಮರುದಿನ  ಪರೀಕ್ಷಿಸಿದಾಗ ನೆಗೆಟಿವ್‌ ಬಂದಿದ್ದು ಮನೆಗೆ ಕಳುಹಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು