ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಚೇರಿಗೆ 2 ಎಕರೆ ಜಮೀನು ಮಂಜೂರು

Last Updated 19 ಮಾರ್ಚ್ 2019, 19:54 IST
ಅಕ್ಷರ ಗಾತ್ರ

ನವದೆಹಲಿ:ಪಕ್ಷದ ಕೇಂದ್ರ ಕಚೇರಿಗಾಗಿ ಬಿಜೆಪಿಗೆ ದೆಹಲಿಯಲ್ಲಿ ಹೆಚ್ಚುವರಿಯಾಗಿ 2 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ. ಚುನಾವಣೆ ಘೋಷಣೆಯಾಗುವುದಕ್ಕೂ ಒಂದು ದಿನ ಮೊದಲು (ಮಾರ್ಚ್ 9) ಈ ಆದೇಶ ಹೊರಬಿದ್ದಿದೆ.

ದೆಹಲಿಯ ದೀನ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಬಿಜೆಪಿಗೆ ಈಗಾಗಲೇ 2 ಎಕರೆ ವಿಸ್ತೀರ್ಣದ ನಿವೇಶನ (6ಎ) ಮಂಜೂರಾಗಿದ್ದು, ಅದರಲ್ಲಿ ಪಕ್ಷದ ಕಚೇರಿಯು 2018ರ ಫೆಬ್ರುವರಿಯಲ್ಲೇ ಕಾರ್ಯಾರಂಭ ಮಾಡಿದೆ. ಈಗ ಆ ನಿವೇಶನದ ಎದುರಿನ ನಿವೇಶನವನ್ನು (3ಬಿ) ಮಂಜೂರು ಮಾಡಲಾಗಿದೆ.

ಹೆಚ್ಚುವರಿ ಜಮೀನು ಬೇಕು ಎಂದು 2015ರಲ್ಲೇ ಬಿಜೆಪಿ ಅರ್ಜಿ ಸಲ್ಲಿಸಿತ್ತು. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಅರ್ಜಿಯನ್ನು ಮನ್ನಿಸಿ, ಜಮೀನು ಮಂಜೂರು ಮಾಡಿತ್ತು. ಆದರೆ ನಿವೇಶನದ ಅಳತೆ ಸರಿಯಾಗಿಲ್ಲ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಜಮೀನು ಮಂಜೂರು ಆಗುವುದು ವಿಳಂಬವಾಯಿತು ಎಂದು ಮೂಲಗಳು ಹೇಳಿವೆ.

ನಿಯಮ ಮತ್ತು ಮಂಜೂರಾತಿ

* 101ರಿಂದ 200 ಸಂಸದರು ಇರುವ ಪಕ್ಷಕ್ಕೆ 2 ಎಕರೆ ವಿಸ್ತೀರ್ಣದ ನಿವೇಶನ ನೀಡಬೇಕು

* 200ಕ್ಕಿಂತ ಹೆಚ್ಚು ಸಂಸದರು ಇರುವ ಪಕ್ಷಕ್ಕೆ ಒಟ್ಟು 4 ಎಕರೆ ವಿಸ್ತೀರ್ಣದಷ್ಟು ಜಮೀನು ನೀಡಬೇಕು

* 2 ಎಕರೆ ಈ ಮೊದಲು ಬಿಜೆಪಿಗೆ ಮಂಜೂರಾಗಿದ್ದ ನಿವೇಶನದ ವಿಸ್ತೀರ್ಣ

* 2.1 ಎಕರೆ ಹೆಚ್ಚುವರಿಯಾಗಿ ಬಿಜೆಪಿಗೆ ಮಂಜೂರಾಗಿರುವ ವಿಸ್ತೀರ್ಣ

* ₹ 2.08 ಕೋಟಿ ಹೆಚ್ಚುವರಿ ನಿವೇಶನಕ್ಕೆ ಬಿಜೆಪಿ ಪಾವತಿ ಮಾಡಬೇಕಿರುವ ಮೊತ್ತ

* ಚುನಾವಣೆ ಘೋಷಣೆಯಾಗುವುದಕ್ಕೂ ಒಂದು ದಿನ ಮೊದಲು ನಿವೇಶನವನ್ನು ಮಂಜೂರು ಮಾಡಲಾಗಿದೆ

* ಇದು ‘ಗೃಹ ಉದ್ದೇಶ’ದ ನಿವೇಶನವಾಗಿತ್ತು. ಮಾರ್ಚ್‌ 9ರಂದು ಅದನ್ನು ‘ಸಾರ್ವಜನಿಕ ಮತ್ತು ಅರೆ ಸಾರ್ವಜನಿಕ ಉದ್ದೇಶ’ದ ನಿವೇಶನವನ್ನಾಗಿ ಪರಿವರ್ತಿಸಲಾಗಿದೆ

***
* 2006ರಲ್ಲಿ ಯುಪಿಎ ಸರ್ಕಾರವೇ ನಿಯಮಗಳಿಗೆ ಬದಲಾವಣೆ ತಂದಿತ್ತು. ಆ ಪ್ರಕಾರವೇ ಜಮೀನು ಮಂಜೂರಾಗಿದೆ

-ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT