ಖರೀದಿಸಿದ ಆಕಳು ಹಾಲು ನೀಡದ್ದಕ್ಕೆ ಮಾರಾಟಗಾರನನ್ನು ಹೊಡೆದು ಸಾಯಿಸಿದ!

7

ಖರೀದಿಸಿದ ಆಕಳು ಹಾಲು ನೀಡದ್ದಕ್ಕೆ ಮಾರಾಟಗಾರನನ್ನು ಹೊಡೆದು ಸಾಯಿಸಿದ!

Published:
Updated:

ಕೋಟ(ರಾಜಸ್ಥಾನ): ಜಾನುವಾರು ಮಾರಾಟಗಾರ ಧನ್ನಾಲಾಲ್ ಗುಜಾರ್ (65) ಎಂಬುವರನ್ನು ಹೊಡೆದು ಸಾಯಿಸಿದ ಘಟನೆ ಬರಾನ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ತಮ್ಮ ಕುಟುಂಬ ಖರೀದಿಸಿದ್ದ ಆಕಳುಗಳು ನಿರೀಕ್ಷೆಗೆ ತಕ್ಕಷ್ಟು ಹಾಲು ನೀಡದಿದ್ದುದಕ್ಕೆ ಸಿಟ್ಟಿಗೆದ್ದ ಪ್ರಕಾಶ್ ಗುಜಾರ್ (30) ಎಂಬಾತ ಧನ್ನಾಲಾಲ್ ಅವರನ್ನು ಕಟ್ಟಿಗೆಯಿಂದ ಥಳಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಬರಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ಕಾಲೂರಾಮ್ ವರ್ಮಾ ತಿಳಿಸಿದ್ದಾರೆ. 

ಪ್ರಕಾಶ್ ಅವರ ಕುಟುಂಬಕ್ಕೆ ಧನ್ನಾಲಾಲ್ ಅವರ ಮಗ ಆಕಳುಗಳನ್ನು ಮಾರಾಟ ಮಾಡಿದ್ದ. ಅವು ಹಾಲು ನೀಡುತ್ತಿಲ್ಲ ಎಂಬ ಕಾರಣಕ್ಕೆ ಇಬ್ಬರ ನಡುವೆ ಭಾರಿ ವಾಗ್ವಾದ ನಡೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಪ್ರಕಾಶ್ ನಾಪತ್ತೆಯಾಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 1

    Sad
  • 0

    Frustrated
  • 4

    Angry

Comments:

0 comments

Write the first review for this !