ದೆಹಲಿ: ಕಾರ್ಖಾನೆ ಕಟ್ಟಡ ಕುಸಿದು ಬಿದ್ದು 7 ಮಂದಿ ಸಾವು

7
8 ಮಂದಿ ಆಸ್ಪತ್ರೆಗೆ ದಾಖಲು

ದೆಹಲಿ: ಕಾರ್ಖಾನೆ ಕಟ್ಟಡ ಕುಸಿದು ಬಿದ್ದು 7 ಮಂದಿ ಸಾವು

Published:
Updated:

ನವದೆಹಲಿ: ಮೋತಿ ನಗರದ ಸುದರ್ಶನ್ ಪಾರ್ಕ್‌ ಬಳಿ ಗುರುವಾರ ತಡರಾತ್ರಿ ಕಾರ್ಖಾನೆ ಕಟ್ಟಡವೊಂದು ಕುಸಿದುಬಿದ್ದು 7 ಮಂದಿ ಮೃತಪಟ್ಟಿದ್ದಾರೆ. ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆದಿದ್ದು 8 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಜಾವದ ವೇಳೆಗೆ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಅವಶೇಷಗಳಡಿ ಇದ್ದ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ಮೂಲಗಳು ತಿಳಿಸಿವೆ.

ಇನ್ನು ಕೆಲವು ಮೂಲಗಳ ಪ್ರಕಾರ, ಬಣ್ಣ ತಯಾರಿಸುವ ಕಾರ್ಖಾನೆ ಕಟ್ಟಡ ಇದಾಗಿದ್ದು, ಮೂರು ಅಂತಸ್ತು ಹೊಂದಿದೆ. ಸ್ಫೋಟ ಸಂಭವಿಸಿದ್ದೇ ಕಟ್ಟಡ ಕುಸಿತಕ್ಕೆ ಕಾರಣ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !