ಸೋಮವಾರ, ಮಾರ್ಚ್ 30, 2020
19 °C

₹70 ಸಾವಿರಕ್ಕೆ ಪ್ರಾಣ ಉಳಿಸುವ ವೆಂಟಿಲೇಟರ್ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದಲ್ಲಿ ದಿನೇದಿನೇ ಕೋವಿಡ್–19 ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಡಿಮೆ ವೆಚ್ಚದ ಪೋರ್ಟಬಲ್ ವೆಂಟಿಲೇಟರ್‌ಗಳನ್ನು ಅಭಿವೃದ್ಧಿ ಪಡಿಸುತ್ತಿದೆ.

ಈ ವೆಂಟಿಲೇಟರ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿರುದ ವೆಂಟಿಲೇಟರ್‌ಗಳಿಗಿಂತ ಕಡಿಮೆ ದರದ್ದಾಗಿವೆ. ‘ಮಾರುಕಟ್ಟೆಯಲ್ಲಿ ಪ್ರಸ್ತುತ ಒಂದು ವೆಂಟಿಲೇಟರ್ ಬೆಲೆ ಸುಮಾರು ₹ 40 ಲಕ್ಷವಿದೆ. ಆದರೆ, ಭಾರತದಲ್ಲಿ ಲಭ್ಯವಿರುವ ಸಾಮಾಗ್ರಿ ಬಳಸಿಕೊಂಡು ಕಾನ್ಪುರ ಐಐಟಿ ₹ 70 ಸಾವಿರ ವೆಚ್ಚದಲ್ಲಿ ವೆಂಟಿಲೇಟರ್‌ಗಳನ್ನು ತಯಾರಿಸುತ್ತಿದೆ’ ಎಂದು ಕಾನ್ಪುರ ಐಐಟಿಯ ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದ್ದಾರೆ. 

‘ನೋಕಾ ರೊಬೊಟಿಕ್ಸ್’ ನವೋದ್ಯಮ ಸಂಸ್ಥೆ ನಡೆಸುತ್ತಿರುವ ಕಾನ್ಪುರ ಐಐಟಿಯ ಪದವೀಧರರಾದ ನಿಖಿಲ್ ಕುರ್ಲೆ ಮತ್ತು ಹರ್ಷಿತ್ ರಾಥೋಡ್, ಪೋರ್ಟಬಲ್ ವೆಂಟಿಲೇಟರ್‌ಗಳ ಮೂಲಮಾದರಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. 

ಬೆಂಗಳೂರಿನ ನಾರಾಯಣ ಹೃದ್ರೋಗ ಚಿಕಿತ್ಸಾ ಕೇಂದ್ರದ (ಎನ್‌ಐಸಿಎಸ್‌) ವೈದ್ಯರು ಸೇರಿದಂತೆ ಒಟ್ಟು ಒಂಬತ್ತು ಸದಸ್ಯರ ತಂಡವನ್ನು ಕಾನ್ಪುರ ಐಐಟಿ ರಚಿಸಿದೆ. ವೆಂಟಿಲೇಟರ್‌ನ ಮೂಲಮಾದರಿಯನ್ನು ಈ ತಂಡವು ಪರಿಶೀಲಿಸಿದ್ದು, ಒಂದು ತಿಂಗಳಲ್ಲಿ ಸುಮಾರು 1 ಸಾವಿರ ಪೋರ್ಟಬಲ್ ವೆಂಟಿಲೇಟರ್‌ಗಳು ತಯಾರಾಗಲಿವೆ ಎನ್ನಲಾಗಿದೆ.  ವೆಂಟಿಲೇಟರ್‌ಗಳ ಉತ್ಪಾದನಾ ವೆಚ್ಚವನ್ನು ‘ಕೇರ್ ಇನ್ ಇಂಡಿಯಾ’ ಕ್ರೌಡ್ ಸೋರ್ಸಿಂಗ್ ಫ್ಲಾಟ್‌ಫಾರಂ ನೆರವಿನಿಂದ ಪಡೆಯಲಾಗುತ್ತಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು