ನಮೋ ಟಿವಿ ವಿರುದ್ಧ ಚುನಾವಣೆ ಆಯೋಗಕ್ಕೆ ಆಮ್‌ ಆದ್ಮಿ ಪಕ್ಷ ದೂರು

ಶನಿವಾರ, ಏಪ್ರಿಲ್ 20, 2019
29 °C

ನಮೋ ಟಿವಿ ವಿರುದ್ಧ ಚುನಾವಣೆ ಆಯೋಗಕ್ಕೆ ಆಮ್‌ ಆದ್ಮಿ ಪಕ್ಷ ದೂರು

Published:
Updated:

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮಾವೇಶ, ಭಾಷಣದ ಕ್ಷಣಕ್ಷಣದ ಮಾಹಿತಿ ನೀಡುವ ಬಿಜೆಪಿಯ 'ನಮೋ ಟಿ.ವಿ' ವಿರುದ್ಧ ಆಮ್‌ ಆದ್ಮಿ ಪಕ್ಷ ಚುನಾವಣೆ ಆಯೋಗಕ್ಕೆ ಸೋಮವಾರ ದೂರು ನೀಡಿದೆ. 

ಈ ಬಗ್ಗೆ ಚುನಾವಣೆ ಆಯೋಗಕ್ಕೆ ಪತ್ರ ಬರೆದಿರುವ ಆಮ್‌ ಆದ್ಮಿ ಪಕ್ಷ,  'ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕವೂ ಪಕ್ಷವೊಂದು ತನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ವಾಹಿನಿ ಆರಂಭಿಸಲು ಅವಕಾಶ ನೀಡುವುದು ನಿಯಮವೇ. ಒಂದು ವೇಳೆ ವಾಹಿನಿಯು ಚುನಾವಣೆ ಆಯೋಗದಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದಾದರೆ ಆಯೋಗ ಅದರ ವಿರುದ್ಧ ಕೈಗೊಂಡಿರುವ ಕ್ರಮಗಳೇನು' ಎಂದು ಆಮ್‌ ಆದ್ಮಿ ಪಕ್ಷ ಪ್ರಶ್ನೆ ಮಾಡಿದೆ. 

'ವಾಹಿನಿಯಲ್ಲಿ ಪ್ರಸಾರವಾಗುವ ವಸ್ತು ವಿಷಯ, ಪ್ರಸಾರಕ್ಕೆ ಆಗುವ ಖರ್ಚು ವೆಚ್ಚಗಳ ಕುರಿತು ಬಿಜೆಪಿಯೇನಾದರೂ ಮಾಧ್ಯಮ ಪ್ರಮಾಣೀಕರಣ ಸಮಿತಿಯಿಂದ(ಎಂಸಿಸಿ) ಅನುಮತಿ ಪಡೆದಿದೆಯೇ? ಇಲ್ಲ ಎಂದಾದರೆ, ಎಂಸಿಸಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಾರಣ ಕೇಳಿ ನೋಟಿಸ್‌ ಯಾಕೆ ನೀಡಿಲ್ಲ,' ಎಂದೂ ಆಮ್‌ ಆದ್ಮಿ ಪಕ್ಷ ಕೇಳಿದೆ. 

ಅಲ್ಲದೆ, 'ತನ್ನ ಕಾರ್ಯಕ್ರಮಗಳ ಪ್ರಸಾರಕ್ಕೆ ವಾಹಿನಿ ಆರಂಭಿಸುವ ಮೂಲಕ ರಾಜಕೀಯದ ಘನತೆ ಮತ್ತು ಪರಂಪರೆಯನ್ನು ಬಿಜೆಪಿ ಹಾಳು ಮಾಡಿದೆ,' ಎಂದೂ ಆಪ್‌ ಆರೋಪಿಸಿದೆ. 

ಈ ಹಿನ್ನೆಲೆಯಲ್ಲಿ ಮಾತನಾಡಿರುವ ಚುನಾವಣೆ ಆಯೋಗದ ಚುನಾವಣಾ ಸಮಿತಿಯ ವಕ್ತಾರ, 'ಆಪ್‌ ನೀಡಿರುವ ದೂರನ್ನು ಭಾರತೀಯ ಚುನಾವಣೆ ಆಯೋಗವು ಪರಾಮರ್ಶೆ ಮಾಡುತ್ತಿದೆ,' ಎಂದು ಹೇಳಿದ್ದಾರೆ.  

ನಮೋ ಟಿ.ವಿ.ಗೆ ಬಿಜೆಪಿ ಭಾನುವಾರವಷ್ಟೇ ಚಾಲನೆ ನೀಡಿತ್ತು. ಅದರ ಲಾಂಛನದಲ್ಲಿ ಮೋದಿ ಅವರ ಭಾವಿಚಿತ್ರವೂ ಇತ್ತು. ಆದರೆ, ವಾಹಿನಿಯ ಮಾಲೀಕತ್ವದ ಕುರಿತು ಬಿಜೆಪಿ ಸ್ಪಷ್ಟವಾಗಿ ಏನನ್ನೂ ಹೇಳಿರಲಿಲ್ಲ. 

ಇದನ್ನೂ ಓದಿನಮೋ ಟಿ.ವಿಗೆ ಚಾಲನೆ

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !