ಮಂಗಳವಾರ, ಆಗಸ್ಟ್ 20, 2019
27 °C

ಅಕ್ರಮ ಪ್ರವೇಶ: ಮಾಲ್ಡೀವ್ಸ್‌ ಮಾಜಿ ಉಪಾಧ್ಯಕ್ಷ ವಶಕ್ಕೆ

Published:
Updated:

ಚೆನ್ನೈ: ಮಾಲ್ಡೀವ್ಸ್‌ನ ಮಾಜಿ ಉಪಾಧ್ಯಕ್ಷ ಅಹ್ಮದ್‌ ಅದೀಬ್‌ ಅಬ್ದುಲ್‌ ಗಫೂರ್‌ ಅವರನ್ನು ತಮಿಳುನಾಡಿನ ಬಂದರು ನಗರ ತೂತ್ತುಕುಡಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಅವರು ಬೋಟ್‌ವೊಂದರ ಸಿಬ್ಬಂದಿ ಎಂದು ಹೇಳಿಕೊಂಡು ಭಾರತದೊಳಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದರು ಎನ್ನಲಾಗಿದೆ. ಮಾಲ್ಡೀವ್ಸ್‌ನಲ್ಲಿ ಅವರ ವಿರುದ್ಧ ಭ್ರಷ್ಟಾಚಾರದ ಹಲವು ಪ್ರಕರಣಗಳು ಇವೆ.

ಚಿಕಿತ್ಸೆಗಾಗಿ ಅವರು ಹಲವು ಬಾರಿ ಭಾರತಕ್ಕೆ ಬಂದಿದ್ದಾರೆ. ಆದರೆ, ಈ ಬಾರಿ ಅವರ ಬಳಿ ಅಗತ್ಯ ದಾಖಲೆಗಳು ಇರಲಿಲ್ಲ. ಜುಲೈ 28ರಂದು ಮಾಲೆ ಯಿಂದ ಹೊರಟ ಬೋಟ್‌ನಲ್ಲಿ 9 ಸಿಬ್ಬಂದಿ ಇದ್ದರು. ಆರೋಗ್ಯ ತಪಾ ಸಣೆಗಾಗಿ ಭಾರತಕ್ಕೆ ಹೋಗಬೇಕು ಎಂಬ ಕಾರಣ ಹೇಳಿ ಅದೀಬ್‌ ಅವರೂ ಈ ಬೋಟ್‌ ಹತ್ತಿಕೊಂಡಿದ್ದರು.

ಬೋಟ್‌ನಲ್ಲಿ ಹೆಚ್ಚುವರಿವ್ಯಕ್ತಿ ಇದ್ದಾರೆ ಎಂಬ ಮಾಹಿತಿ ಯನ್ನು ಬೋಟ್‌ ತೂತ್ತುಕುಡಿ ಬಂದರು ಸಮೀಪಿಸಿದಾಗ ಅದರ ಸಿಬ್ಬಂದಿ ಬಂದರು ಅಧಿಕಾರಿಗಳಿಗೆ ನೀಡಿದ್ದರು. ಅಧಿಕಾರಿಗಳು ಅದೀಬ್‌ ಅವರ ತನಿಖೆ ನಡೆಸಿ, ಅಗತ್ಯ ದಾಖಲೆಗಳು ಇಲ್ಲದ ಕಾರಣ ವಶಕ್ಕೆ ಪಡೆದರು. ಕೇಂದ್ರದ ಸಂಸ್ಥೆಗಳ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.  ಅಬ್ದುಲ್ಲಾ ಮಾಲ್ಡೀವ್ಸ್‌ ಅಧ್ಯಕ್ಷರಾಗಿದ್ದಾಗ ಅವರ ಹತ್ಯೆಗೆ ಯತ್ನಿಸಿದ್ದ ಆರೋಪ ಅದೀಬ್‌ ಮೇಲಿದೆ.

Post Comments (+)