ಗೂಗಲ್‌ನಲ್ಲಿ ಚುನಾವಣಾ ಜಾಹೀರಾತು ಜೋರು

ಶನಿವಾರ, ಏಪ್ರಿಲ್ 20, 2019
31 °C

ಗೂಗಲ್‌ನಲ್ಲಿ ಚುನಾವಣಾ ಜಾಹೀರಾತು ಜೋರು

Published:
Updated:

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ದಿನಗಳು ಬಾಕಿ ಉಳಿದಿವೆ. ಗೂಗಲ್ ಹಾಗೂ ಅದರ ಸಂಬಂಧಿತ ಜಾಲತಾಣಗಳಲ್ಲಿ ಜಾಹೀರಾತು ನೀಡುವ ಭರಾಟೆಯೂ ಜೋರಾಗಿ ಇದೆ. ರಾಜಕೀಯ ಪಕ್ಷಗಳಾದ ಬಿಜೆಪಿ, ಟಿಡಿಪಿ ಜಾಹೀರಾತಿಗಾಗಿ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಖರ್ಚು ಮಾಡುತ್ತಿವೆ. ಕಾಂಗ್ರೆಸ್ ಈ ವಿಚಾರದಲ್ಲಿ ಹಿಂದಿದೆ ಎಂದು ಗೂಗಲ್ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. 

ಪಕ್ಷ - ಜಾಹೀರಾತಿಗೆ ಮಾಡುತ್ತಿರುವ ಖರ್ಚು

ಬಿಜೆಪಿ - ₹1.21 ಕೋಟಿ

ಕಾಂಗ್ರೆಸ್ - ₹54,100

ಟಿಡಿಪಿ - ₹1.48 ಕೋಟಿ

ವೈಎಸ್‌ಆರ್‌ಸಿ - ₹1.04 ಕೋಟಿ

ರಾಜಕೀಯ ಪಕ್ಷಗಳ ಒಟ್ಟು ವೆಚ್ಚ; ₹3.76 ಕೋಟಿ (ಫೆಬ್ರುವರಿ 2019ರಿಂದ)

ಜಾಹೀರಾತು ಹಬ್ಬ: ಗೂಗಲ್, ಯೂಟ್ಯೂಬ್‌, ಇತರೆ ತಾಣಗಳಲ್ಲಿ ರಾಜಕೀಯ ಜಾಹೀರಾತು

ಜಾಹೀರಾತಿಗೆ ಖರ್ಚು ಮಾಡುತ್ತಿರುವ ರಾಜ್ಯಗಳ ಮುಂಚೂಣಿಯಲ್ಲಿ ಆಂಧ್ರಪ್ರದೇಶ

ಆಂಧ್ರದಲ್ಲಿ ಜಾಹೀರಾತು ನೀಡಲು ಟಿಡಿಪಿ–ವೈಎಸ್‌ಆರ್‌ಸಿ ಮಧ್ಯೆ ಪೈಪೋಟಿ

***
ಗೂಗಲ್ ಹಾಗೂ ಸಂಬಂಧಿತ ತಾಣಗಳಲ್ಲಿ ರಾಜಕೀಯ ಜಾಹೀರಾತು ಪ್ರಕಟಣೆಯಲ್ಲಿ ಪಾರದರ್ಶಕತೆ ಪ್ರದರ್ಶಿಸುವುದು ನಮ್ಮ ಗುರಿ. ಈ ವರದಿಯಲ್ಲಿ ಲೋಕಸಭಾ ಚುನಾವಣೆಯ ಜಾಹೀರಾತುಗಳು, ರಾಜಕೀಯ ಪಕ್ಷಗಳು, ಹಾಲಿ ಲೋಕಸಭಾ ಸಂಸದರ ಮಾಹಿತಿಯೂ ಇದೆ. 
–ಗೂಗಲ್

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !