ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹಿನ್ನೆಲೆ: ಅಂಚೆ ಮತಪತ್ರ ಆಯ್ಕೆಗೆ ಇದ್ದ ವಯೋಮಿತಿ ಇಳಿಕೆ

Last Updated 26 ಜೂನ್ 2020, 13:36 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಅಂಚೆ ಮತಪತ್ರ ಆಯ್ಕೆಗೆ ಇರುವ ವಯೋಮಿತಿಯನ್ನು ಸಡಿಲಿಸಲಾಗಿದೆ. ಪರಿಷ್ಕರಣೆಯಂತೆ 65 ಅಥವಾ ಅದಕ್ಕೂ ಹೆಚ್ಚಿನ ವಯೋಮಾನದವರು ಅಂಚೆ ಮತಪತ್ರ ಆಯ್ಕೆಗೆ ಅವಕಾಶವಿದೆ.ಈ ಮೊದಲು 80 ವರ್ಷ ಮೇಲ್ಪಟ್ಟವರಿಗೆ ಈ ಅವಕಾಶ ನೀಡಲಾಗಿತ್ತು.

ಕೊರೊನಾ ಬಿಕ್ಕಟ್ಟು ಆರಂಭವಾದ ನಂತರ ದೇಶದಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅಲ್ಲಿನ ಮತದಾರರು ಈ ತಿದ್ದುಪಡಿಯ ಅನುಕೂಲ ಪಡೆಯಲಿದ್ದಾರೆ. ಕಾನೂನು ಸಚಿವಾಲಯ ಚುನಾವಣಾ ನಿಯಮಗಳಿಗೆ ಈ ಸಂಬಂಧ ತಿದ್ದುಪಡಿ ತಂದಿದೆ.

65 ಅಥವಾ ಅದಕ್ಕೂ ಮೀರಿದ ವಯಸ್ಸಿನವರಿಗೆ ಕೊರೊನಾ ಬಾಧಿಸುವ ಸಾಧ್ಯತೆ ಹೆಚ್ಚಿರುವ ಕಾರಣ ಈ ತೀರ್ಮಾನಕ್ಕೆ ಬರಲಾಗಿದೆ. ಚುನಾವಣಾ ಆಯೋಗದ ಸಲಹೆ ಆಧರಿಸಿ ‘ಕೋವಿಡ್‌–19 ಶಂಕಿತರು ಮತ್ತು ಪೀಡಿತರಿಗೂ’ ಅಂಚೆ ಮತ ಪತ್ರ ಆಯ್ಕೆಯ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT