ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಪಡೆ ದಿನಾಚರಣೆ ವೇಳೆ ‘ಸುಖೋಯ್–30ಎಂಕೆಐ’ ಸಾಹಸ ಪ್ರದರ್ಶನ: ಪಾಕ್‌ಗೆ ಮುಖಭಂಗ

ವಾಯುಪಡೆಗೆ 87ನೇ ಜನ್ಮದಿನ ಸಂಭ್ರಮ
Last Updated 8 ಅಕ್ಟೋಬರ್ 2019, 10:20 IST
ಅಕ್ಷರ ಗಾತ್ರ

ನವದೆಹಲಿ:ಬಾಲಾಕೋಟ್ ಕಾರ್ಯಾಚರಣೆ ವೇಳೆ ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿದ್ದ ‘ಸುಖೋಯ್–30ಎಂಕೆಐ’ ಯುದ್ಧ ವಿಮಾನ ಮಂಗಳವಾರ ಸಾಹಸ ಪ್ರದರ್ಶಿಸಿದೆ. ಇದು ನೆರೆ ರಾಷ್ಟ್ರವನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದೆ.

ಭಾರತೀಯ ವಾಯುಪಡೆ ಸ್ಥಾಪನೆಯಾದ 87ನೇ ವರ್ಷಾಚರಣೆ ನಿಮಿತ್ತ ದೆಹಲಿಯ ಹಿಂಡನ್ ವಾಯುನೆಲೆಯಲ್ಲಿ ವಿವಿಧ ಯುದ್ಧವಿಮಾನಗಳ ತಂಡಗಳು ಸಾಹಸ ಪ್ರದರ್ಶಿಸಿದವು. ಇವುಗಳಲ್ಲಿಎರಡು ‘ಸುಖೋಯ್–30ಎಂಕೆಐ’, ಮೂರು ‘ಮಿರಾಜ್–2000’ ಯುದ್ಧ ವಿಮಾನಗಳ ತಂಡವು ‘ಎವೆಂಜರ್’ ಸಾಹಸ ಪ್ರದರ್ಶಿಸಿತು.ಈ ವೇಳೆ‘ಅವೆಂಜರ್ 1’ ಸ್ಥಾನದಲ್ಲಿ ‘ಸುಖೋಯ್–30ಎಂಕೆಐ’ ಇತ್ತು. ಇದೇ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ವಿಶೇಷವೆಂದರೆ, ಬಾಲಾಕೋಟ್ ಕಾರ್ಯಾಚರಣೆ ವೇಳೆ ವಿಮಾನವನ್ನು ಮುನ್ನಡೆಸಿದ್ದ ಅದೇ ಇಬ್ಬರು ವಿಂಗ್ ಕಮಾಂಡರ್‌ಗಳೇ ಇಂದೂ ಸಹ ಸಾಹಸ ಪ್ರದರ್ಶಿಸಿದ್ದಾರೆ.

ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಫೆಬ್ರುವರಿ 27ರಂದು ಪಾಕಿಸ್ತಾನದ ಬಾಲಾಕೋಟ್‌ಗೆ ನುಗ್ಗಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಗಳ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿದ್ದವು. ಆ ಸಂದರ್ಭ ಪಾಕಿಸ್ತಾನದ ಎಫ್–16 ಯುದ್ಧವಿಮಾನವನ್ನು (ಅಮೆರಿಕ ನಿರ್ಮಿತ ಯುದ್ಧವಿಮಾನ) ಭಾರತೀಯ ವಿಂಗ್ ಕಮಾಂಡರ್‌ಗಳು ಹೊಡೆದುರುಳಿಸಿದ್ದರು. ನಂತರ ಭಾರತದ ಮಿಗ್–21 ಅನ್ನು ಪಾಕಿಸ್ತಾನ ಹೊಡೆದುರುಳಿಸಿತ್ತು. ಆದರೆ,ಎಫ್–16 ಕಳೆದುಕೊಂಡಿರುವುದಕ್ಕೆ ಪ್ರತಿಯಾಗಿಭಾರತದ‘ಸುಖೋಯ್–30ಎಂಕೆಐ’ ವಿಮಾನವನ್ನೂ ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು.

‘ಬಾಲಾಕೋಟ್ ದಾಳಿಗೆ ವಾಯುಪಡೆಯ ಎಲ್ಲ ಸಿಬ್ಬಂದಿ, ಕಮಾಂಡರ್‌ಗಳು, ಘಟಕಗಳು ವೃತ್ತಿಪರವಾಗಿ ಕೊಡುಗೆ ನೀಡಿದ್ದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ’ ಎಂದು ವಾಯುಪಡೆಯ ನೂತನ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ(ಆರ್‌ಕೆಎಸ್ ಭದೌರಿಯಾ)ಹೇಳಿದ್ದಾರೆ.

ಬಾಲಾಕೋಟ್ ಕಾರ್ಯಾಚರಣೆ ವೇಳೆ ‘ಮಿಗ್–21’ ಯುದ್ಧವಿಮಾನ ಮುನ್ನಡೆಸಿ, ಅದು ಪತನವಾದ ಬಳಿಕ ಪಾಕಿಸ್ತಾನದ ಸೆರೆ ಸಿಕ್ಕಿ ಬಿಡುಗಡೆಯಾಗಿ ಬಂದಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸಹ ಇಂದು‘ಮಿಗ್–21’ರ ತಂಡವನ್ನು ಮುನ್ನಡೆಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT