ಶುಕ್ರವಾರ, ಜುಲೈ 30, 2021
21 °C

ವಿಶೇಷ ವಿಮಾನದ ಮೂಲಕ ವಲಸೆ ಕಾರ್ಮಿಕರು ಅಸ್ಸಾಂಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನಟ ಸೋನು ಸೂದ್‌ ಬೆಂಬಲದೊಂದಿಗೆ ಏರ್‌ಏಷ್ಯಾ ಇಂಡಿಯಾ ವಿಮಾನಯಾನ ಸಂಸ್ಥೆ, 180 ವಲಸೆ ಕಾರ್ಮಿಕರನ್ನು ಮುಂಬೈನಿಂದ ಅಸ್ಸಾಂನಲ್ಲಿರುವ ಸಿಲಚರ್‌ಗೆ ವಿಶೇಷ ವಿಮಾನದ ಮೂಲಕ ಮಂಗಳವಾರ ಕರೆದೊಯ್ದಿದೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ಸಾವಿರಾರು ವಲಸೆ ಕಾರ್ಮಿಕರಿಗೆ ಸೋನು ಸೂದ್‌ ನೆರವಾಗಿದ್ದಾರೆ. ಅವರ ಈ ನೆರವು ಹಲವರಿಗೆ ಸ್ಫೂರ್ತಿಯಾಗಿದ್ದು, ಅವರ ಜೊತೆಗೂಡಿ ಇಂಥ ಕಾರ್ಯ ಮಾಡುತ್ತಿರುವುದಕ್ಕೆ ಹೆಮ್ಮೆಯಿದೆ’ ಎಂದು ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಅನೂಪ್‌ ಮಂಜೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

‘ಲಾಕ್‌ಡೌನ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರ ನೆರವಿಗಾಗಿಯೇ ‘ಉಮೀದ್‌ ಕಿ ಉಡಾನ್‌’ ಯೋಜನೆಯಡಿ ನಾವು 12 ವಿಶೇಷ ವಿಮಾನಗಳನ್ನು ಕಾರ್ಯಾಚರಣೆಗೊಳಿಸಿದ್ದೇವೆ’ ಎಂದು ಅನೂಪ್‌ ಹೇಳಿದ್ದಾರೆ.     

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು