ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಗೆ ಉಗ್ರ ಮಸೂದ್ ಅಜರ್‌ ಸವಾಲು

Last Updated 16 ಮಾರ್ಚ್ 2019, 4:22 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ‘ಪ್ರಧಾನಿ ನರೇಂದ್ರ ಮೋದಿ ಅವರಿಗಿಂತನನ್ನ ಆರೋಗ್ಯ ಉತ್ತಮವಾಗಿದೆ. ನಾನೆಷ್ಟು ಸದೃಢನಾಗಿದ್ದೇನೆಂದು ತಿಳಿಯಲು ಮೋದಿ ಅವರು ನನ್ನೊಂದಿಗೆ ಬಿಲ್ಲು (ಆರ್ಚರಿ), ಶೂಟಿಂಗ್‌ ಸ್ಪರ್ಧೆ ನಡೆಸಲಿ’ ಎಂದುಜೈಷ್‌ ಎ ಮೊಹಮದ್‌ (ಜೆಇಎಂ) ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ ತನ್ನ ಅಂಕಣದಲ್ಲಿ ಬರೆದುಕೊಂಡಿದ್ದಾನೆ.

ಜೆಇಎಂಸಂಘಟನೆಯ ಮುಖವಾಣಿ ಅಲ್-ಕಲಮ್‌ನಲ್ಲಿ ಸಾದಿ ಹೆಸರಲ್ಲಿ ಮಸೂದ್‌ ಅಂಕಣ ಬರೆದಿರುವ ಬಗ್ಗೆ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಉಗ್ರ ಮಸೂದ್ ಅಜರ್ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾನೆ ಎಂದು ಪಾಕಿಸ್ತಾನ ಸೇನೆ ಹಾಗೂ ಭಾರತದ ಸೇನೆ ಹೇಳಿತ್ತು. ಅದಕ್ಕೆ ಈ ವಾರದ ಅಂಕಣದಲ್ಲಿ ಉತ್ತರ ನೀಡಿರುವ ಅಜರ್‌, ‘ ‘ನಮ್ಮ ಸಂಘಟನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ ಮತ್ತು ಎಲ್ಲವೂ ಚೆನ್ನಾಗಿದೆ’ ಎಂದು ಹೇಳಿದ್ದಾನೆ.

ಪುಲ್ವಾಮಾ ದಾಳಿ ನಡೆಸಿದ ಕಾಶ್ಮೀರದ ಆದಿಲ್‌ ಅಹಮದ್ ದರ್‌ನಂತಹವರು ಇನ್ನೂ ಇದ್ದಾರೆ. ಶೀಘ್ರದಲ್ಲಿಯೇ ಯಾವಾಗಾದರೂ ಬರಬಹುದು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳು ಸ್ವಾತಂತ್ರ್ಯ ಚಳವಳಿಗಳು. ಸಮಯ ಕಳೆದಂತೆ ಇದು ಆ ಭಾಗದಾದ್ಯಂತ ಮತ್ತು ಕಣಿವೆ ಹೊರಗೂ ಹಬ್ಬಬಹುದು ಎಂದು ಬರೆದುಕೊಂಡಿದ್ದಾನೆ.

‘ನನ್ನ ವೈಯುಕ್ತಿಕ ವಿಷಯದ ಕುರಿತು ಸಾಮಾನ್ಯವಾಗಿ ನಾನು ಬರೆಯುವುದಿಲ್ಲ. ಆದರೆ, ನನ್ನ ವಿರುದ್ಧ ಯೋಜಿತ ಪ್ರಚಾರ ನಡೆಯುತ್ತಿರುವುದರಿಂದ ಹೇಳಬೇಕಾಗಿದೆ. ನಾನು ತುಂಬಾ ಚೆನ್ನಾಗಿದ್ದೇನೆ. ನನ್ನ ಮೂತ್ರಪಿಂಡ ಮತ್ತು ಯಕೃತ್ ಉತ್ತಮವಾಗಿದೆ. 17 ವರ್ಷಗಳಿಂದ ನಾನು ಯಾವುದೇ ಆಸ್ಪತ್ರೆಗೂ ಹೋಗಿಲ್ಲ ಮತ್ತು ವೈದ್ಯರನ್ನು ಸಂಪರ್ಕಿಸಿಯೇ ಅನೇಕ ವರ್ಷಗಳಾಗಿವೆ’ ಎಂದು ಸ್ಪಷ್ಟಡಿಸಿದ್ದಾನೆ.

‘ಕುರಾನ್‌ನಲ್ಲಿ ಹೇಳಿರುವ ಆಹಾರ ಪದ್ಧತಿಯನ್ನು ಪಾಲಿಸುತ್ತಿರುವುದರಿಂದನನಗೆ ರಕ್ತದೊತ್ತಡ, ಮಧುಮೇಹದಂತಹ ಯಾವುದೇ ತೊಂದರೆ ಇಲ್ಲ. ನನ್ನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಬಿಡುವಿನ ಸಮಯದಲ್ಲಿ ನಾನು ಬಿಲ್ಲುಗಾರಿಕೆ ಅಭ್ಯಾಸ ಮಾಡುತ್ತೇನೆ. ನರೇಂದ್ರ ಮೋದಿ ನನ್ನೊಂದಿಗೆ ಸ್ಪರ್ಧೆಗೆ ಬರಲಿ, ನಾನು ಅವರಿಗಿಂತ ಸದೃಢ ಎಂಬುದನ್ನು ನಿರೂಪಿಸುತ್ತೇನೆ’ ಎಂದಿದ್ದಾನೆ.

ಮಸೂದ್ ಅಝರ್ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು ಮನೆಯಿಂದಲೂ ಹೊರಗೆ ಕಾಲಿಡಲಾಗದ ಸ್ಥಿತಿಯಲ್ಲಿದ್ದಾನೆ ಎಂದು ಸ್ವತಃ ಪಾಕಿಸ್ತಾನದ ವಿದೇಶಾಂಗ ಸಚಿವರೇ ಹೇಳಿದ್ದರು. ಇದಕ್ಕೆ ಭಾರತದ ಅಧಿಕಾರಿಗಳು, ‘ಮಸೂದ್ ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿದ್ದು, ರಾವಲ್ಪಿಂಡಿಯಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದಿತ್ತು.

ಅಲ್‌ಖೈದಾ ಉಗ್ರ ಸಂಘಟನೆಯ ಸಂಸ್ಥಾಪಕ ಒಸಾಮ ಬಿನ್ ಲಾಡೆನ್ ಆಪ್ತನಾಗಿದ್ದ ಮಸೂದ್ ಅಜರ್‌ನನ್ನು ಭಾರತದ ಸೇನೆ 1994 ರಲ್ಲಿ ಬಂಧಿಸಿತ್ತು. ಆದರೆ ಈತನ ಬಿಡುಗಡೆಗೆ ಒತ್ತಾಯಿಸಿ ಉಗ್ರರು 1999 ರಲ್ಲಿ ಭಾರತದ ವಿಮಾನವನ್ನು ಹೈಜಾಕ್ ಮಾಡಿದ್ದರು. ಪರಿಣಾಮ ಭಾರತ ಸರ್ಕಾರ ಈತನನ್ನು ಬಿಡುಗಡೆ ಮಾಡಿತ್ತು.

ಭಾರತೀಯ ಸಂಸತ್‌ ಮೇಲೆ 2001ರಲ್ಲಿ ನಡೆದ ಉಗ್ರರ ದಾಳಿಯಿಂದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿಯವರೆಗೆ ಎಲ್ಲಾ ಪ್ರಮುಖ ಉಗ್ರರ ದಾಳಿಗಳಲ್ಲಿ ಈತನ ಕೈವಾಡವಿರುವುದು ದೃಢಪಟ್ಟಿದೆ. ಹೀಗಾಗಿ ಈತನನ್ನು ಭಾರತಕ್ಕೆ ಹಸ್ತಾಂತರಿಸಲು ಕೋರಿ ಪಾಕಿಸ್ತಾನಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಸಾಕ್ಷ್ಯಾಧಾರಗಳ ಕೊರತೆ ನೆಪವೊಡ್ಡಿ ಈತನನ್ನು ಹಸ್ತಾಂತರಿಸಲು ಪಾಕಿಸ್ತಾನ ಹಿಂದೇಟು ಹಾಕುತ್ತಲೇ ಬಂದಿದೆ.

ಮಸೂದ್‌ ತನ್ನ ಹಿಂದಿನಲೇಖನದಲ್ಲಿ ಭಾರತವನ್ನು ವ್ಯಂಗ್ಯ ಮಾಡಿದ್ದ. ‘ಬೆಟ್ಟದ ಮೇಲೆ ಬಾಂಬ್‌ ಹಾಕಿ ಜೈಷ್‌ ಸಾಮ್ರಾಜ್ಯದ ಮೇಲೆ ದಾಳಿ ನಡೆಸಲಾಗಿದೆ ಎಂದು ಭಾರತ ವಾದಿಸುತ್ತಿದೆ’ ಎಂಬ ಅರ್ಥದ ತಲೆ ಬರಹ ನೀಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT