ಹುತಾತ್ಮ ಯೋಧನ ಮೃತದೇಹದ ಮುಂದೆ ಸೆಲ್ಫಿ ಕ್ಲಿಕ್ಕಿಸಿದ ಕೇಂದ್ರ ಸಚಿವ ಕಣ್ಣಂತ್ತಾನಂ 

ಶನಿವಾರ, ಮೇ 25, 2019
33 °C

ಹುತಾತ್ಮ ಯೋಧನ ಮೃತದೇಹದ ಮುಂದೆ ಸೆಲ್ಫಿ ಕ್ಲಿಕ್ಕಿಸಿದ ಕೇಂದ್ರ ಸಚಿವ ಕಣ್ಣಂತ್ತಾನಂ 

Published:
Updated:

ಕೋಯಿಕ್ಕೋಡ್: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧ ವಸಂತ ಕುಮಾರ್ ಮೃತದೇಹದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿದ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತ್ತಾನಂ ವಿರುದ್ದ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವಸಂತ ಕುಮಾರ್ ಅವರ ಅಂತ್ಯ ಸಂಸ್ಕಾರ ನಡೆಯುತ್ತಿದ್ದ ವೇಳೆ ಮೃತದೇಹದ ಮುಂದ ನಿಂತು ಕ್ಲಿಕ್ಕಿಸಿದ ಸೆಲ್ಫಿಯನ್ನು ಕಣ್ಣಂತ್ತಾನಂ ತಮ್ಮ ಫೇಸ್‍ಬುಕ್ ಪುಟದಲ್ಲಿ ಶೇರ್ ಮಾಡಿದ್ದರು.

ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಧೀರ ಯೋಧ ವಿ.ವಿ ವಸಂತಕುಮಾರ್ ಅವರ ಅಂತ್ಯ ಸಂಸ್ಕಾರ ಅವರ ನಿವಾಸದಲ್ಲಿ ನಡೆದಿದೆ. ವಸಂತ ಕುಮಾರ್ ಅವರಂಥಾ ಧೀರ ಯೋಧರ ತ್ಯಾಗದಿಂದಾಗಿ ನಾವು ಇಲ್ಲಿ ಸುರಕ್ಷಿತವಾಗಿ ಬದುಕಲು ಸಾಧ್ಯವಾಗಿರುವುದು ಎಂದು ಕಣ್ಣಂತ್ತಾನಂ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿದ್ದರು. 

ಆದರೆ ಮೃತದೇಹದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದ ಸಚಿವರ ವಿರುದ್ಧ ನೆಟಿಜನ್‍ಗಳು ಕಾಮೆಂಟ್ ದಾಳಿ ನಡೆಸಿದ್ದಾರೆ. ಸಾವಿನ ಮನೆಯಲ್ಲಿಯೂ ರಾಜಕೀಯ ಬುದ್ದಿ ತೋರಿಸುತ್ತೀರಾ ಎಂದು ಕೆಲವರು ಪ್ರಶ್ನಿಸಿದ್ದರೆ, ಸ್ವಲ್ಪ ಬುದ್ಧಿ ಇದ್ದಿದ್ದರೆ ನೀವು ಈ ರೀತಿ ಮಾಡುತ್ತಿರಲಿಲ್ಲ ಎಂದು ಕೆಲವರು ಕಾಮೆಂಟಿಸಿದ್ದಾರೆ.

ಫೇಸ್‍ಬುಕ್ ಪೋಸ್ಟ್  ವಿರುದ್ಧ ನೆಟಿಜನ್‍ಗಳ ಆಕ್ರೋಶ ತೀವ್ರವಾಗುತ್ತಿದ್ದಂತೆ ಕಣ್ಣಂತ್ತಾನಂ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಆದರೆ ಬೆಂಬಿಡದ ನೆಟಿಜನ್‍ಗಳು ಅವರ ಇತರ ಪೋಸ್ಟ್ ಗಳಿಗೂ ಬೈದು ಕಾಮೆಂಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !