ನವದೆಹಲಿ(ಪಿಟಿಐ): ‘ಆರ್‌ಟಿಐ ಕಾಯ್ದೆಗೆ ತಿದ್ದುಪಡಿ ತರುವ ಮುಖಾಂತರ ಮೋದಿ ಸರ್ಕಾರ ಮಾಹಿತಿ ಆಯುಕ್ತರ ಅಧಿಕಾರವನ್ನು ಮೊಟಕುಗೊಳಿಸಿದೆ. ಈ ತಿದ್ದುಪಡಿ ಆರ್‌ಟಿಐ ಕಾಯ್ದೆಯ ನಾಶಕ್ಕೆ ನಡೆಸುತ್ತಿರುವ ಅಂತಿಮ ದಾಳಿಯಾಗಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದರು.

‘ಮಾಹಿತಿ ಆಯುಕ್ತರು ಸರ್ಕಾರದ ಸೂಚನೆಗೆ ತಕ್ಕಂತೆ ನಡೆದುಕೊಳ್ಳುವುದನ್ನು ಈ ತಿದ್ದುಪಡಿ ಖಾತ್ರಿಪಡಿಸಿದೆ.ಸಂಸತ್ತಿನಲ್ಲಿ ಈ ತಿದ್ದುಪಡಿಗಳನ್ನು ನಾವು ವಿರೋಧಿಸಿದ್ದೆವು. ಮುಂದೆಯೂ ಇದನ್ನು ವಿರೋಧಿಸುತ್ತೇವೆ. ಸಾಂವಿಧಾನಿಕ ಸಂಸ್ಥೆಗಳನ್ನು ಈ ರೀತಿ ದುರ್ಬಲಗೊಳಿಸುವುದನ್ನು ನಾವು ಖಂಡಿಸುತ್ತೇವೆ. ದೇಶದಾದ್ಯಂತ ಇರುವ ಆರ್‌ಟಿಐ ಕಾರ್ಯಕರ್ತರು ಈ ಕಾಯ್ದೆಯ ಮುಖಾಂತರ ಭ್ರಷ್ಟಾಚಾರವನ್ನು ಹೊರಗೆಳೆದಿದ್ದಾರೆ, ಸರ್ಕಾರದ ನೀತಿ, ಯೋಜನೆಗಳ ಪರಿಣಾಮಗಳನ್ನು ಅಳೆದಿದ್ದಾರೆ. ಆದರೆ ಈ ಸಂಸ್ಥೆ ತನ್ನ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಭಾವಿಸಿರುವ ಬಿಜೆಪಿ, ಶಾಸನದ ನಾಶಕ್ಕೆ ಮುಂದಾಗಿದೆ’ ಎಂದು ಪ್ರಕಟಣೆಯಲ್ಲಿ ಸೋನಿಯಾ ಗಾಂಧಿ ತಿಳಿಸಿದ್ದಾರೆ.

‘ಮಾಹಿತಿ ಆಯುಕ್ತರ ಹುದ್ದೆಗೆ ನೀಡುತ್ತಿದ್ದ ಸೌಲಭ್ಯಗಳನ್ನೂ ಕಡಿತಗೊಳಿಸುವ ಮುಖಾಂತರ, ಪ್ರಾಮಾಣಿಕ ಹಿರಿಯ ಅಧಿಕಾರಿಗಳು ಈ ಹುದ್ದೆಗೆ ಬಾರದಂತೆ ಖಾತ್ರಿಪಡಿಸಲಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.