ಸೋಮವಾರ, ಏಪ್ರಿಲ್ 6, 2020
19 °C

ಅಮಿತ್ ಶಾ ಸಭೆಗೂ ಮುನ್ನ ಗೋಲಿ ಮಾರೊ ಘೋಷಣೆ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಭೆಗೆ ತೆರಳುತ್ತಿದ್ದ ವೇಳೆ ಗೋಲಿ ಮಾರೊ (ಗುಂಡಿಕ್ಕಿ) ಘೋಷಣೆ ಕೂಗಿದ ಆರೋಪದಡಿ ಮೂವರನ್ನು ಬಂಧಿಸಲಾಗಿದೆ.

ಸಭೆ ನಡೆಯುತ್ತಿದ್ದ ಶಾಹಿದ್‌ ಮಿನಾರ್‌ ಮೈದಾನಕ್ಕೆ ತೆರಳುತ್ತಿದ್ದ ಗುಂಪು ಮೈದಾ ಮಾರ್ಕೆಟ್‌ ಸಮೀಪ ಗೋಲಿ ಮಾರೊ ಘೋಷಣೆ ಕೂಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ಸುಭಾಸ್‌ ಸರ್ಕಾರ್‌ ಅವರು, ‘ಗೋಲಿ ಮಾರೊ ಘೋಷಣೆಯನ್ನು ನಮ್ಮ ಕಾರ್ಯಕರ್ತರು ಕೂಗಿಲ್ಲ. ಬಿಜೆಪಿಗೆ ಕೆಟ್ಟ ಹೆಸರು ತರಲು ಟಿಎಂಸಿ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ’ ಎಂದು ಹೇಳಿದ್ದರು.

ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿತ್ತು.

ದ್ವೇಷ ಬಿತ್ತುವ ಘೋಷಣೆ ಕೂಗಿದವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಡ ಪಕ್ಷಗಳು ಎಚ್ಚರಿಸಿದ್ದವು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು