ಅಮಿತ್‌ ಶಾ ಎಡವಟ್ಟಿನಿಂದ ಕೆಳಬಿದ್ದ ರಾಷ್ಟ್ರಧ್ವಜ: ವಿಡಿಯೊ ವೈರಲ್

7
ಟ್ವಿಟರ್‌ನಲ್ಲಿ ಟ್ರೋಲ್

ಅಮಿತ್‌ ಶಾ ಎಡವಟ್ಟಿನಿಂದ ಕೆಳಬಿದ್ದ ರಾಷ್ಟ್ರಧ್ವಜ: ವಿಡಿಯೊ ವೈರಲ್

Published:
Updated:

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಎಡವಟ್ಟಿನಿಂದ ರಾಷ್ಟ್ರಧ್ವಜ ಕೆಳಬಿದ್ದು ಮುಜುಗರದ ಸನ್ನಿವೇಶ ಸೃಷ್ಟಿಯಾದ ವಿಡಿಯೊ ವೈರಲ್ ಆಗಿದೆ.

ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಬುಧವಾರ ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ನಡೆದಿದೆ. ಧ್ವಜಾರೋಹಣ ಮಾಡಲು ಮುಂದಾದ ಶಾ ಅದಕ್ಕೆ ಕಟ್ಟಿರುವ ಹಗ್ಗವನ್ನು ವೇಗವಾಗಿ ಎಳೆದಿದ್ದಾರೆ. ಆದರೆ, ಅವರು ಎಳೆದಿದಿದ್ದು ಧ್ವಜವನ್ನು ಕೆಳಗಿಳಿಸಲು ಇರುವ ಹಗ್ಗವನ್ನು. ಪರಿಣಾಮವಾಗಿ ಕೆಳಮುಖವಾಗಿ ಜಾರಿದ ಧ್ವಜವು ಸ್ತಂಭದ ಬುಡಕ್ಕೆ ಬಿದ್ದಿದೆ. ತಕ್ಷಣ ಎಚ್ಚೆತ್ತ ಶಾ ಮತ್ತೊಂದು ಹಗ್ಗವನ್ನು ಎಳೆದಿದ್ದು, ಧ್ವಜಾರೋಹಣ ನೆರವೇರಿದೆ.

ಕಾರ್ಯಕ್ರಮದ ದೃಶ್ಯವನ್ನು ದೂರದರ್ಶನ ವಾಹಿನಿ ನೇರ ಪ್ರಸಾರ ಮಾಡಿದ್ದು, ಇದೀಗ ಆ ವಿಡಿಯೊ ವೈರಲ್ ಆಗಿದೆ. ಧ್ವಜ ಕೆಳಬೀಳುತ್ತಿರುವಾಗ ಕಕ್ಕಾಬಿಕ್ಕಿಯಾದ ಆ್ಯಂಕರ್ ‘ಛಿ, ಛಿ, ಛಿ’ ಎಂದು ಹೇಳಿದ್ದು ವಿಡಿಯೊದ ಹಿನ್ನೆಲೆ ಧ್ವನಿಯಲ್ಲಿ ಕೇಳಿಸಿದೆ. ನಂತರ ಒಂದು ಕ್ಷಣ ಏನು ಹೇಳಬೇಕು ಎಂದು ತೋಚದ ವಾರ್ತಾವಾಚಕರು ಮೌನವಾಗಿದ್ದಾರೆ.

ಟ್ವಿಟರ್‌ನಲ್ಲಿ ಟ್ರೋಲ್: ದೂರದರ್ಶನದ ವಿಡಿಯೊ ಉಲ್ಲೇಖಿಸಿ ಅನೇಕರು ಟ್ವಿಟರ್‌ನಲ್ಲಿ ಟ್ರೋಲ್ ಮಾಡಿದ್ದಾರೆ.

‘ಛಿ, ಛಿ, ಛಿ ಎಂಬ ಉದ್ಘಾರವನ್ನು ತಡೆಹಿಡಿಯಲಾಗದ ದೂರದರ್ಶನದ ಆ್ಯಂಕರ್‌ಗೆ ಆರೋಗ್ಯಪೂರ್ಣವಾದ ದೀರ್ಘಾಯಸ್ಸನ್ನು ಹಾರೈಸುತ್ತೇನೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಪ್ರದರ್ಶನ ನೋಡಿ ಬಂದ ಉದ್ಘಾರವದು’ ಎಂದು ಪ್ಯಾರ್‌ ಸೆ ಮರಿಯೊ ಎಂಬ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.
 

‘ಬಿಜೆಪಿ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣದ ವೇಳೆ ಅಮಿತ್‌ಶಾ ರಾಷ್ಟ್ರಧ್ವಜವನ್ನು ಕೆಳಬೀಳಿಸಿದಾಗ ದೂರದರ್ಶನದ ಆ್ಯಂಕರ್‌ ನೀರವ ಮೌನವಹಿಸಿದ್ದರು’ ಎಂದು ಮತ್ತೊಂದು ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.
 

‘ಇತರರನ್ನು ಕೆಳಬೀಳಿಸುವಲ್ಲಿ ಪರಿಣತರಾಗಿರುವ ಪಲಾಯನವಾದಿ ಈಗ ರಾಷ್ಟ್ರಧ್ವಜಕ್ಕೂ ಅದನ್ನೇ ಮಾಡಿದ್ದಾರೆ. #AmitShahDroppedTiranga’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಲೇವಡಿ ಮಾಡಲಾಗಿದೆ.

 

ಬರಹ ಇಷ್ಟವಾಯಿತೆ?

 • 8

  Happy
 • 3

  Amused
 • 1

  Sad
 • 1

  Frustrated
 • 18

  Angry

Comments:

0 comments

Write the first review for this !