ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಸ್ತಾನಿ ಸಂಗೀತ ಲೋಕದ ದಿಗ್ಗಜೆ ಅನ್ನಪೂರ್ಣಾ ದೇವಿ ನಿಧನ

Last Updated 13 ಅಕ್ಟೋಬರ್ 2018, 5:48 IST
ಅಕ್ಷರ ಗಾತ್ರ

ಮುಂಬೈ:ಹಿಂದೂಸ್ತಾನಿ ಸಂಗೀತ ಲೋಕದ ದಿಗ್ಗಜೆ ಅನ್ನಪೂರ್ಣಾ ದೇವಿ (92) ಇಲ್ಲಿನಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ ನಿಧನರಾದರು. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಸಂಗೀತ ಕ್ಷೇತ್ರದಲ್ಲಿನ ಕೊಡುಗೆಗಾಗಿ ಪದ್ಮ ಭೂಷಣಕ್ಕೆ ಭಾಜನರಾಗಿದ್ದರು. ಉಸ್ತಾದ್ ಬಾಬಾ ಅಲ್ಲವುದ್ದೀನ್ ಖಾನ್ ಅವರ ಮಗಳಾಗಿರುವ ಅನ್ನಪೂರ್ಣಾ ಅವರು ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಸಹೋದರಿಯಾಗಿದ್ದಾರೆ. ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ಅವರನ್ನು ವಿವಾಹವಾಗಿದ್ದ ಅನ್ನಪೂರ್ಣಾ ದೇವಿ ನಂತರ ವಿಚ್ಛೇದನ ಪಡೆದಿದ್ದರು. ಅಪಾರ ಶಿಷ್ಯರನ್ನು ಹೊಂದಿದ್ದಾರೆ.

ಸುರ್ಬಹಾರ್ ವಾದಕಿಯಾಗಿರುವ ಇವರು ಅತ್ಯುತ್ತಮಸಿತಾರ್ ವಾದಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT