ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಪ್ರತಿಭಟನೆ: ಮೃತರ ಕುಟುಂಬ ಭೇಟಿಯಾದ ಪ್ರಿಯಾಂಕಾ ಗಾಂಧಿ

Last Updated 4 ಜನವರಿ 2020, 19:24 IST
ಅಕ್ಷರ ಗಾತ್ರ

ಮುಜಾಫರ್‌ನಗರ/ಮೀರಠ್‌:ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧನಡೆದ ಪ್ರತಿಭಟನೆ ವೇಳೆ
ಗಾಯಗೊಂಡವರು ಮತ್ತು ಮೃತಪಟ್ಟ ಕುಟುಂಬದ ಸದಸ್ಯರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅನಿರೀಕ್ಷಿತವಾಗಿ ಶನಿವಾರ ಭೇಟಿ ಮಾಡಿದರು.

ಪ್ರಿಯಾಂಕಾ ಅವರೊಂದಿಗೆ ಪಕ್ಷದ ಮುಖಂಡ ಇಮ್ರಾನ್‌ ಮಸೂದ್‌ ಅವರು ಇದ್ದರು. ‘ನಿಮ್ಮೊಂದಿಗೆ ನಾನಿದ್ದೇನೆ’ ಎಂದು ಪ್ರತಿಭಟನೆಯಲ್ಲಿ ಗಾಯಗೊಂಡವರಿಗೆ ಪ್ರಿಯಾಂಕಾ ಅಭಯ ನೀಡಿದರು.

‘ಜನರನ್ನು ನಿರ್ದಯವಾಗಿ ಪೊಲೀಸರು ಥಳಿಸಿದ್ದಾರೆ. ಮಕ್ಕಳು ಮತ್ತುಏಳು ತಿಂಗಳ ಗರ್ಭಿಣಿಯ ಮೇಲೆಯೂ ಹಲ್ಲೆ ನಡೆಸಲಾಗಿದೆ’ ಎಂದು ಅವರು ಆರೋಪಿಸಿದರು. ಡಿ.24ರಂದು ಕುಟುಂಬದವರ ಭೇಟಿಗೆ ಬಂದಿದ್ದ ಪ್ರಿಯಾಂಕಾ ಅವರ ಪ್ರವೇಶವನ್ನು ಪೊಲೀಸರು ನಿರಾಕರಿಸಿದ್ದರು.

ಯೋಗಿ ಟೀಕೆ (ಲಖನೌ ವರದಿ): ಪ್ರಿಯಾಂಕಾ ಗಾಂಧಿ ಅವರ ಭೇಟಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿಟೀಕೆ ಮಾಡಿದ್ದಾರೆ.

‘ಜನರಿಂದ ಪದೇ ಪದೇ ತಿರಸ್ಕೃತಗೊಂಡವರು ಸಂತ್ರಸ್ತರನ್ನು ಭೇಟಿಯಾಗಿ ಸಮಾಧಾನದ ರಾಜಕೀಯ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT