ಗುರುವಾರ , ನವೆಂಬರ್ 21, 2019
20 °C

ಆಂಧ್ರ ಮುಖ್ಯ ಕಾರ್ಯದರ್ಶಿ ವರ್ಗಾವಣೆ

Published:
Updated:
Prajavani

ಅಮರಾವತಿ: ದಿಡೀರ್ ಬೆಳವಣಿಗೆಯಲ್ಲಿ ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ ಎಲ್‌.ವಿ.ಸುಬ್ರಹ್ಮಣ್ಯಂ ಅವರನ್ನು ವೈ.ಎಸ್. ಜಗನ್‌ಮೋಹನ್ ನೇತೃತ್ವದ ಸರ್ಕಾರ ವರ್ಗಾವಣೆ ಮಾಡಿದೆ.

ಪ್ರಧಾನ ಕಾರ್ಯದರ್ಶಿ (ಆಡಳಿತ) ಸ್ಥಾನಕ್ಕೆ ಮುಖ್ಯಮಂತ್ರಿ ಆಯ್ಕೆ ಮಾಡಿಕೊಂಡಿದ್ದ ಅಧಿಕಾರಿ ಪ್ರವೀಣ್‌ ಪ್ರಕಾಶ್ ಅವರಿಗೆ ಮೂರು ದಿನಗಳ ಹಿಂದಷ್ಟೇ ಸುಬ್ರಹ್ಮಣ್ಯಂ ಅವರು ನೋಟಿಸ್‌ ಜಾರಿ ಮಾಡಿ ಉತ್ತರದ ನಿರೀಕ್ಷೆಯಲ್ಲಿದ್ದರು.  

ಸುಬ್ರಹ್ಮಣ್ಯ ಅವರ ಸೇವಾವಧಿ ಇನ್ನೂ ಐದು ತಿಂಗಳಿದೆ. ಅವರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಪ್ರಧಾನ ನಿರ್ದೇಶಕರಾಗಿ ನೇಮಿಸಲಾಗಿದೆ. ನೀರಬ್‌ ಕುಮಾರ್‌ ಪ್ರಸಾದ್ ಅವರನ್ನು ಪ್ರಭಾರ ಮುಖ್ಯ ಕಾರ್ಯದರ್ಶಿ ಆಗಿ ನೇಮಿಸಲಾಗಿದೆ.

 

ಪ್ರತಿಕ್ರಿಯಿಸಿ (+)