ಭಾನುವಾರ, ಡಿಸೆಂಬರ್ 15, 2019
26 °C

ರಾಜಸ್ಥಾನದಲ್ಲಿ ಶೇ. 72.7, ತೆಲಂಗಾಣದಲ್ಲಿ ಶೇ. 67 ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಧಪುರ ರಾಜ ಕುಟುಂಬದ ಗಜ ಸಿಂಗ್ ಮತ್ತು ಪತ್ನಿ ಮತದಾನ ಮಾಡಿ ಹೊರಬರುತ್ತಿರುವುದು (ಎಡ), ಹೈದರಾಬಾದ್ ನಲ್ಲಿ ಸಾನಿಯಾ ಮಿರ್ಜಾ ಮತದಾನ  (ಕೃಪೆ: ಎಎನ್ಐ)

ನವದೆಹಲಿ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಶೇ. 72.7 ಮತದಾನವಾಗಿದ್ದು,  ತೆಲಂಗಾಣದಲ್ಲಿ ಶೇ.67 ಮತದಾನ ಆಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ರಾಜಸ್ಥಾನದಲ್ಲಿ ಮತದಾನದ ವೇಳೆ ಅಹಿತಕರ ಘಟನೆಗಳೂ ವರದಿಯಾಗಿದೆ. ಇಲ್ಲಿ ಸಿಕಾರ್ ಜಿಲ್ಲೆಯ ಫತೇಪುರ್ ಸುಭಾಷ್ ಶಾಲೆಯ ಮತಗಟ್ಟೆಯಲ್ಲಿ  ಎರಡು ಗುಂಪುಗಳ ನಡುವೆ ನಡೆದ ವಾಗ್ವಾದ ಸಂಘರ್ಷಕ್ಕೆ ತಿರುಗಿದೆ. ನಕಲಿ ಮತದಾರರನ್ನು ಮತಗಟ್ಟೆಗೆ ಪ್ರವೇಶಿಸುತ್ತಿದ್ದಾರೆ ಎಂದು ಆರೋಪಿಸಿ ಎರಡು ಗುಂಪುಗಳು ವಾಗ್ವಾದ ಮಾಡಿ, ಆಮೇಲೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

 ಈ ಸಂಘರ್ಷದಲ್ಲಿ 2 ಬೈಕ್‍ಗಳಿಗೆ ಬೆಂಕಿ ಹಚ್ಚಿದ್ದು,  ಜನರನ್ನು ಪೊಲೀಸರು ಚದುರಿಸಿದ್ದಾರೆ .

ಇಲ್ಲಿನ ಬಿಕಾನೀರ್ ಜಿಲ್ಲೆಯ 172ನೇ ಮತಗಟ್ಟೆಯಲ್ಲಿ ಕೇಂದ್ರ ಸಚಿವ ಹಾಗು ಹಿರಿಯ ಬಿಜೆಪಿ ನೇತಾರ ಅರ್ಜುನ್ ರಾಮ್ ಮೇಘ್ವಾಲ್ ಮೂರುವರೆ ತಾಸು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಆ ಮತಗಟ್ಟೆಯಲ್ಲಿ ಇವಿಎಂ ದೋಷ ಕಂಡು ಬಂದಿದ್ದರಿಂದ ಮತದಾನ ವಿಳಂಬವಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು