ಸೋಮವಾರ, ಸೆಪ್ಟೆಂಬರ್ 21, 2020
25 °C

ರಾಜಸ್ಥಾನ, ಛತ್ತೀಸಗಡದಲ್ಲಿಯೂ ಕಾಂಗ್ರೆಸ್‍ಗೆ ಮುನ್ನಡೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಧಾನಸಭಾ ಚುನಾವಣೆ ಮತ ಎಣಿಕೆಯ ಮೊದಲ ಸುತ್ತಿನ ಫಲಿತಾಂಶ ಹೊರ ಬಿದ್ದಾಗ ರಾಜಸ್ಥಾನ, ಛತ್ತೀಸಗಡದಲ್ಲಿಯೂ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ತೆಲಂಗಾಣದಲ್ಲಿ ಟಿಆರ್‌ಎಸ್ ಮುನ್ನಡೆಯಲ್ಲಿದ್ದು ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ಪೈಪೋಟಿ ನಡೆಸುತ್ತಿವೆ.

ಮಿಜೋರಾಂನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಇಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಮುನ್ನಡೆಯಲ್ಲಿದೆ.

ಕೇಂದ್ರ ಸರ್ಕಾರದಲ್ಲಿರುವ ಬಿಜೆಪಿ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಅಧಿಕಾರದಲ್ಲಿದೆ. ಹಾಗಾಗಿ ಕೇಂದ್ರ ಸರ್ಕಾರಕ್ಕೆ ಈ ಚುನಾವಣೆ ಅಗ್ನಿ ಪರೀಕ್ಷೆಯಾಗಲಿದೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಬಿಜೆಪಿಗೆ ತೀವ್ರ ಪೈಪೋಟಿಯನ್ನೊಡ್ಡಿದೆ. ಇಲ್ಲಿನ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ದ ಕಾಂಗ್ರೆಸ್ ಕಿಡಿ ಕಾರುತ್ತಿದ್ದು, ರಾಜೇ ಬಗ್ಗೆ  ಬಿಜೆಪಿಯಲ್ಲಿಯೂ ಭಿನ್ನಮತ ಇದೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಆದಾಗ್ಯೂ, ರಾಜಸ್ಥಾನದಲ್ಲಿ ವಸುಂಧರಾ ಅವರಿಗೆ ಸರಿ ಸಾಟಿಯಾಗುವ ಯಾವುದೇ ನಾಯಕರು ಇಲ್ಲ.

ಛತ್ತೀಸಗಡ ಬಿಜೆಪಿಯ ಭದ್ರಕೋಟೆಯಾಗಿದೆ.  ಮತದಾನೋತ್ತರ ಸಮೀಕ್ಷೆಗಳು ರಮಣ್ ಸಿಂಗ್ ಸರ್ಕಾರ ಅಧಿಕಾರ ಮುಂದುವರಿಸುವುದಿಲ್ಲ ಎಂದು ಹೇಳಿದರೂ  ಅಜಿತ್ ಜೋಗಿ-  ಮಾಯಾವತಿ ಮೈತ್ರಿಯಿಂದಾಗಿ ವಿಪಕ್ಷಗಳ ಮತ ಹಂಚಿಕೆಯಾಗಿ ಬಿಜೆಪಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆಯಲ್ಲಿದೆ ಬಿಜೆಪಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು