ಕಾಶ್ಮೀರದ ಸಮಸ್ಯೆ ಬಿಗಡಾಯಿಸಿದಾಗಲೆಲ್ಲಾ ಮುನ್ನೆಲೆಗೆ ಬರುವ ಅಟಲ್ ಮಾತುಗಳು

7

ಕಾಶ್ಮೀರದ ಸಮಸ್ಯೆ ಬಿಗಡಾಯಿಸಿದಾಗಲೆಲ್ಲಾ ಮುನ್ನೆಲೆಗೆ ಬರುವ ಅಟಲ್ ಮಾತುಗಳು

Published:
Updated:

ನವದೆಹಲಿ: ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಸಂಬಂಧ ಅಟಲ್ ಬಿಹಾರಿ ವಾಜಪೇಯಿ ಅವರು 2003ರಲ್ಲಿ ಹೇಳಿದ್ದ ಮಾತುಗಳು ಈಗಲೂ ಕೇಳಿಬರುತ್ತಿವೆ. ವಾಜಪೇಯಿ ಅವರ ಆ ಮಾತುಗಳಿಂದಾಗಿ ಅವರ ಜನಪ್ರಿಯತೆ ಅಂದಿನಿಂದ ಇಂದಿನವರೆಗೂ ಅದೇ ರೀತಿ ಉಳಿದಿದೆ. ಕಾಶ್ಮೀರದ ಸಮಸ್ಯೆ ಬಿಗಡಾಯಿಸಿದಾಗಲೆಲ್ಲಾ ಆ ಮಾತುಗಳು ಮತ್ತೆ–ಮತ್ತೆ ಮುನ್ನೆಲೆಗೆ ಬಂದಿವೆ.

2003ರಲ್ಲಿ ವಾಜಪೇಯಿ ಅವರು ಕಾಶ್ಮೀರದಲ್ಲಿ ರ‍್ಯಾಲಿ ನಡೆಸಿದ್ದರು. ‘ಇನ್ಸಾನಿಯತ್ (ಮಾನವೀಯತೆ), ಜಮ್ಹೂರಿಯತ್ (ಪ್ರಜಾಪ್ರಭುತ್ವ) ಮತ್ತು ಕಾಶ್ಮೀರಿಯತ್‌ಗಳ (ಕಾಶ್ಮೀರೀತನಕ್ಕೆ ಆದ್ಯತೆ) ಮೂಲಕ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಅವರು ಹೇಳಿದ್ದರು.

2015ರಲ್ಲಿ ಪಿಡಿಪಿ ಮತ್ತು ಬಿಜೆಪಿ ಕಾಶ್ಮೀರದಲ್ಲಿ ಸರ್ಕಾರ ರಚಿಸಿದವು. ಆಗ ಪಿಡಿಪಿ ಅಧ್ಯಕ್ಷರಾಗಿದ್ದ ಮುಫ್ತಿ ಮಹಮ್ಮದ್ ಸಯೀದ್, ‘ಅಟಲ್ ಬಿಹಾರಿ ಅವರ ಹೆಜ್ಜೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ನಡೆಯಬೇಕು’ ಎಂದು ಹೇಳಿದ್ದರು.

‘ಭಾರತದಿಂದ ನಾವು ಬಯಸುವುದು ಇನ್ಸಾನಿಯತ್, ಜಮ್ಹೂರಿಯತ್ ಮತ್ತು ಕಾಶ್ಮೀರಿಯತ್‌ಗಳನ್ನು ಮಾತ್ರ. ಬೇರೇನೂ ಅಲ್ಲ’ ಎಂದು ಹುರಿಯತ್ ಕಾನ್ಫರೆನ್ಸ್‌ನ ಸೈಯದ್ ಅಲಿ ಶಾ ಗಿಲಾನಿ 2017ರಲ್ಲಿ ಹೇಳಿದ್ದರು. 

ಬುಧವಾರವಷ್ಟೇ (ಆಗಸ್ಟ್ 15, 2018) ಪ್ರಧಾನಿ ನರೇಂದ್ರ ಮೋದಿ ಅವರು ವಾಜಪೇಯಿ ಅವರ ಈ ಮಾತುಗಳನ್ನು ಕೆಂಪು ಕೋಟೆಯ ಮೇಲೆ ಪುನರುಚ್ಚರಿಸಿದರು. ‘ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ತೋರಿಸಿದ ಮಾರ್ಗವೇ ಸರಿಯಾದುದು. ಆ ಹಾದಿಯಲ್ಲೇ ನಾವು ನಡೆಯುತ್ತೇವೆ.  ಇನ್ಸಾನಿಯತ್, ಜಮ್ಹೂರಿಯತ್ ಮತ್ತು ಕಾಶ್ಮೀರಿಯತ್‌ಗಳ ಮೂಲಕ ಕಾಶ್ಮೀರವನ್ನು ಅಭಿವೃದ್ಧಿಪಡಿಸುತ್ತೇವೆ’ ಎಂದು ಮೋದಿ ಹೇಳಿದ್ದರು.

ಪ್ರೀತಿ ಮರೆಯಲು ಸಾಧ್ಯವಿಲ್ಲ: ‘ಪ್ರತಿ ಬಾರಿ ಅವರನ್ನು ಭೇಟಿ ಮಾಡಿದಾಗಲೂ ಅವರು ನನಗೆ ತೋರಿಸುತ್ತಿದ್ದ ಪ್ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ’ ಎಂದು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

‘ಅವರ ಬಳಿ ಎಲ್ಲರಿಗೂ ಪ್ರೀತಿ ಇರುತ್ತಿತ್ತು’ ಎಂದು ನ್ಯಾಷನಲ್ ಕಾನ್ಫರೆನ್ಸ್‌ ನಾಯಕ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !