ಚಿ.ಮೂಗೆ ಗೌರವ ಪ್ರಶಸ್ತಿ

7

ಚಿ.ಮೂಗೆ ಗೌರವ ಪ್ರಶಸ್ತಿ

Published:
Updated:
Deccan Herald

ನವದೆಹಲಿ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡುವ 2018ನೇ ಸಾಲಿನ ಗೌರವ ಪ್ರಶಸ್ತಿಗೆ ಹಿರಿಯ ಸಂಶೋಧಕ ಎಂ.ಚಿದಾನಂದ ಮೂರ್ತಿ ಪಾತ್ರರಾಗಿದ್ದಾರೆ.‌

ವಿವಿಧ ಭಾಷೆಗಳಲ್ಲಿ ಸಾಹಿತಿ ಹಾಗೂ ವಿದ್ವಾಂಸರು ನೀಡಿದ ಕೊಡುಗೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.

2017ನೇ ಸಾಲಿಗೆ ವಿದ್ವಾಂಸ ಟಿ.ವಿ.ವೆಂಕಟಾಚಲ ಶಾಸ್ತ್ರಿ ಅವರನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ 2016ನೇ ಸಾಲಿಗೆ ಇತಿಹಾಸಕಾರ ಪ್ರೊ. ಷ.ಶೆಟ್ಟರ್‌ ಭಾಜನರಾಗಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಬುಧವಾರ ಈ ಪ್ರಶಸ್ತಿಗಳನ್ನು ಘೋಷಣೆ ಮಾಡಿದರು.

ಕನ್ನಡಕ್ಕಾಗಿ ನೀಡಿದ ಕೊಡುಗೆಗಾಗಿ ರಾಜ್ಯದ ಮಂಜುನಾಥ ಅವರಿಗೆ ಮಹರ್ಷಿ ಬಾದರಾಯಣ್‌ ವ್ಯಾಸ್‌ ಸಮ್ಮಾನ್‌ (2016) ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !