ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1,038 ಕೋಟಿ ಕಪ್ಪುಹಣ 51 ಜನರ ವಿರುದ್ಧ ಸಿಬಿಐ ಪ್ರಕರಣ

Last Updated 6 ಜನವರಿ 2020, 17:28 IST
ಅಕ್ಷರ ಗಾತ್ರ

ನವದೆಹಲಿ: 2014–15ನೇ ಹಣಕಾಸು ವರ್ಷದಲ್ಲಿ ₹1,038 ಕೋಟಿ ಕಪ್ಪು ಹಣವು ಚೆನ್ನೈನ ಮೂಲದ ಖಾತೆಗಳಿಂದ ಹಾಂಕ್‌ಕಾಂಗ್‌ಗೆ ರವಾನೆಯಾಗಿರುವ ಕುರಿತು 51 ಖಾತೆದಾರರ ವಿರುದ್ಧ ಸಿಬಿಐ ಮೊಕದ್ದಮೆ ದಾಖಲಿಸಿಕೊಂಡಿದೆ.

ಚೆನ್ನೈ ನಿವಾಸಿಗಳ ಖಾತೆಯಲ್ಲಿದ್ದ ಹಣವನ್ನು ಬ್ಯಾಂಕ್ ಆಫ್ ಇಂಡಿಯಾ, ಎಸ್‌ಬಿಐ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಕೆಲ ಅಧಿಕಾರಿಗಳ ನಿರ್ದೇಶನದ ಮೇರೆಗೆ ಹಾಂಕ್‌ಕಾಂಗ್‌ಗೆ ರವಾನಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ಈ ಬ್ಯಾಂಕುಗಳ ನಾಲ್ಕು ಶಾಖೆಗಳಲ್ಲಿರುವ 48 ಸಂಸ್ಥೆಗಳ 51 ಖಾತೆಗಳನ್ನು ಪರಿಶೀಲಿಸಲಾಗಿದ್ದು, ₹1,038.34 ಕೋಟಿ ರವಾನೆಗಾಗಿಯೇ ಈ ಖಾತೆಗಳನ್ನು ತೆರೆಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಸಿಬಿಐ ಹೇಳಿದೆ.

24 ಖಾತೆಗಳಿಂದ ಸರಕು ಆಮದಿಗಾಗಿ ₹488.30 ಕೋಟಿ ರವಾನೆಯಾಗಿದ್ದು, ವಿದೇಶ ಪ್ರವಾಸದ ನೆಪದಲ್ಲಿ 27 ಖಾತೆಗಳಿಂದ ₹549.95 ಕೋಟಿ ರವಾನೆಯಾಗಿದೆ ಎಂದು ಸಿಬಿಐ ತಿಳಿಸಿದೆ.

ಹಣ ರವಾನೆ ಸಂಬಂಧ ಮೊಹಮದ್‌ ಇಬ್ರಾಮ್ಸಾ ಜಾನಿ, ಜೀನತ್ ಮಿಧಾರ್‌ ಹಾಗೂ ನಿಜಾಮುದ್ಧೀನ್‌ ಸೇರಿದಂತೆ 48 ಕಂಪನಿಗಳ ಮೇಲೆ ದೂರು ದಾಖಲು ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT