ಶನಿವಾರ, ಆಗಸ್ಟ್ 24, 2019
22 °C

ಸಿಬಲ್ ಪತ್ನಿ ವಿರುದ್ಧ ಪತ್ರಕರ್ತೆ ಬರ್ಖಾ ದತ್ ದೂರು

Published:
Updated:

ನವದೆಹಲಿ : ಕಾಂಗ್ರೆಸ್‌ ನಾಯಕ ಕಪಿಲ್ ಸಿಬಲ್ ಅವರ ಪತ್ನಿ ಪ್ರಮೀಳಾ ಸಿಬಲ್ ಅವರು ತಮ್ಮ ಮಾಲೀಕತ್ವದ ‘ಎಚ್‌ಟಿನ್ ತಿರಂಗಾ’ ಸುದ್ದಿ ವಾಹಿನಿಯ ಮಹಿಳಾ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪತ್ರಕರ್ತೆ ಬರ್ಖಾ ದತ್ ಅವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ಬರ್ಖಾ ದತ್ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಸಿಬಲ್ ದಂಪತಿಯು ವಾಹಿನಿಯ 200 ನೌಕರರಿಗೆ ಆರು ತಿಂಗಳ ಸಂಬಳ ನೀಡದೆ, ಕೆಲಸದಿಂದ ತೆಗೆದು ಹಾಕಿದ್ದಾರೆ. ಈ ಸಂಬಂಧ ಸಿಬ್ಬಂದಿ ಜತೆ ಅವರು ಮಾತುಕತೆಯನ್ನೂ ನಡೆಸಿಲ್ಲ ಎಂದು ಬರ್ಖಾ ದತ್ ಟ್ವೀಟ್‌ ಮಾಡಿದ್ದಾರೆ.

‘ದೂರನ್ನು ಪರಿಶೀಲಿಸುತ್ತಿದ್ದೇವೆ. ಅಗತ್ಯವಿದ್ದರೆ ಬರ್ಖಾ ದತ್ ಮತ್ತು ಪ್ರಮೀಳಾ ಸಿಬಲ್ ಅವರನ್ನು ಕರೆಸಿ ವಿಚಾರಿಸುತ್ತೇವೆ’ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಹೇಳಿದ್ದಾರೆ.

Post Comments (+)