ಶನಿವಾರ, ಜುಲೈ 31, 2021
28 °C

ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದ ಮೇಕೆ ₹2,500ಗೆ ಹರಾಜು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದ ಮೇಕೆಯನ್ನು ರೈಲ್ವೆ ಇಲಾಖೆ ₹2,500ಗೆ ಹರಾಜು ಮಾಡಿದೆ. ಮಂಗಳವಾರ ಸಂಜೆ ಮಹಾರಾಷ್ಟ್ರದ ಮಸ್ಜೀದ್ ರೈಲ್ವೆ ನಿಲ್ದಾಣದಲ್ಲಿ ಮೇಕೆಯನ್ನು ರೈಲಿನಲ್ಲಿ ಕರೆತಂದ ವ್ಯಕ್ತಿ ಟಿಕೆಟ್ ಕಲೆಕ್ಟರ್ ಬರುತ್ತಿದ್ದಂತೆ ಮೇಕೆಯನ್ನು ಬಿಟ್ಟು ಪರಾರಿಯಾಗಿದ್ದ. ಹಾಗಾಗಿ ಅನಾಥವಾದ ಮೇಕೆಯನ್ನು ಹರಾಜು ಮಾಡಲು ರೈಲ್ವೆ ಇಲಾಖೆ ತೀರ್ಮಾನಿಸಿತ್ತು.

ಗುರುವಾರ ಸಂಜೆ ಮೇಕೆಯನ್ನು ಹರಾಜು ಮಾಡಿದ್ದು ರೈಲ್ವೆಯಲ್ಲಿ ಕೆಲಸ ಕೂಲಿ ಮಾಡುತ್ತಿರುವ ಅಬ್ದುಲ್ ರೆಹಮಾನ್ ಎಂಬವರು ₹2,500 ನೀಡಿ ಖರೀದಿಸಿದ್ದಾರೆ. ಬಸಂತಿ ಎಂಬ ಹೆಸರಿಟ್ಟಿರುವ ಈ ಮೇಕೆಯನ್ನು ರೆಹಮಾನ್ ಅವರು ಪಶ್ಚಿಮ ಬಂಗಾಳದಲ್ಲಿರುವ ತಮ್ಮ ಊರಿಗೆ ಆಗಸ್ಟ್ 16ರಂದು ಕರೆದೊಯ್ಯಲಿದ್ದಾರೆ. 

ನನಗೆ ಬಸಂತಿಯನ್ನು ನೋಡಿದ ಕೂಡಲೇ ಇಷ್ಟವಾಯಿತು. ಆಕೆ ಮುಗ್ದೆ ಮತ್ತು ಶಾಂತ ಸ್ವಭಾವದವಳು. ಆಕೆಯನ್ನು ಕಸಾಯಿಖಾನೆಗೆ ಕೊಡಲಾರೆ. ಬಸಂತಿಯನ್ನು ಖರೀದಿಸಲು ನಾನು ನನ್ನ ಉಳಿತಾಯದ ಎಲ್ಲ ಹಣ ಖರ್ಚು ಮಾಡಿದ್ದೇನೆ. ಆ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ  ರೆಹಮಾನ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು