ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಐ–17 ಹೆಲಿಕಾಪ್ಟರ್ ಹೊಡೆದುರುಳಿಸಿದ್ದು ನಮ್ಮ ಕ್ಷಿಪಣಿ: ಏರ್ ಮಾರ್ಷಲ್

Last Updated 4 ಅಕ್ಟೋಬರ್ 2019, 9:32 IST
ಅಕ್ಷರ ಗಾತ್ರ

ನವದೆಹಲಿ: ಶ್ರೀನಗರದ ವಾಯುನೆಲೆಯಿಂದ ಟೇಕಾಫ್‌ ಆದಎಂಐ–17 ಹೆಲಿಕಾಪ್ಟರ್ ಅನ್ನು ನಮ್ಮಕ್ಷಿಪಣಿಯೇ ಹೊಡೆದುರುಳಿಸಿದೆ ಎಂದು ತನಿಖೆಯಿಂದ ಬಹಿರಂಗವಾಗಿದೆ ಎಂದು ವಾಯುಪಡೆ ಮುಖ್ಯಸ್ಥರಾದ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಶುಕ್ರವಾರ ಹೇಳಿದ್ದಾರೆ.

ವಾಯುಪಡೆ ದಿನಾಚರಣೆ ನಿಮಿತ್ತ ಮಾತನಾಡಿದ ಅವರುಶತ್ರು ಪಾಳಯದ ಹೆಲಿಕಾಪ್ಟರ್‌ ಎಂದು ತಪ್ಪಾಗಿ ಭಾವಿಸಿ ನಮ್ಮ ವಾಯುಪಡೆಯ ಕ್ಷಿಪಣಿಯೇಎಂಐ–17 ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ, ಇದು ನಮ್ಮಿಂದಾದ ತಪ್ಪು ಎಂದು ಅವರು ಹೇಳಿದ್ದಾರೆ.

ಈ ಹೆಲಿಕಾಪ್ಟರ್‌ ದುರಂತದಲ್ಲಿ ಆರು ಸಿಬ್ಬಂದಿ ಹಾಗೂ ಒಬ್ಬರು ನಾಗರೀಕರು ಮೃತಪಟ್ಟಿದ್ದರು. ಇಬ್ಬರು ಅಧಿಕಾರಿಗಳನ್ನು ನೇಮಿಸಿಘಟನೆ ಕುರಿತಂತೆ ತನಿಖೆಗೆ ಆದೇಶ ಮಾಡಲಾಗಿತ್ತು. ತನಿಖೆ ಪೂರ್ಣಗೊಂಡಿದ್ದು ವರದಿಯು ನಮ್ಮ ಕೈಸೇರಿದ್ದು ತಪ್ಪಿತಸ್ಥ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದುಎಂದು ಅವರು ತಿಳಿಸಿದ್ದಾರೆ.

ತಪ್ಪು ನಡೆದಿದ್ದು ಹೇಗೆ?

ಭಾರತೀಯ ವಾಯುಪಡೆಯು ಪ್ರತಿಯೊಂದು ಯುದ್ಧ ವಿಮಾನವನ್ನು ಗುರುತಿಸುವ ವ್ಯವಸ್ಥೆ ಮಾಡಿದೆ. ಇದರಿಂದ, ಶತ್ರು ಪಾಳಯದ ಯುದ್ಧ ವಿಮಾನದ ಜತೆಗಿನ ವ್ಯತ್ಯಾಸ ಗುರುತಿಸಲು ಸಾಧ್ಯವಾಗುತ್ತದೆ. ಆದರೆ, ‘ಎಂಐ–17’ಗೆ ಅಳವಡಿಸಲಾಗಿದ್ದ ವ್ಯವಸ್ಥೆ ಫೆಬ್ರುವರಿ 27ರಂದು ಕೆಲಸ ಮಾಡಿರಲಿಲ್ಲ. ಅದನ್ನು ಸ್ಥಗಿತಗೊಳಿಸಲಾಗಿತ್ತು ಎಂದು ತನಿಖಾಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.

ಈ ವ್ಯವಸ್ಥೆ ಇಲ್ಲದ ಕಾರಣದಿಂದಲೇ ಹೆಲಿಕಾಪ್ಟರ್‌ ಶತ್ರು ರಾಷ್ಟ್ರಕ್ಕೆ ಸೇರಿದೆ ಎಂದು ಭಾವಿಸಿ ಹೊಡೆದುರುಳಿಸಲಾಗಿದೆ ಎಂಬ ಮಾಹಿತಿ ತನಿಖೆಯಿಂದ ಬಹಿರಂಗಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT