2019ರಲ್ಲಿ ಬಿಜೆಪಿ 300+ ಸ್ಥಾನಗಳನ್ನು ಗೆಲ್ಲಲಿದೆ: ಪಿಯೂಶ್‌ ಗೋಯಲ್‌

7

2019ರಲ್ಲಿ ಬಿಜೆಪಿ 300+ ಸ್ಥಾನಗಳನ್ನು ಗೆಲ್ಲಲಿದೆ: ಪಿಯೂಶ್‌ ಗೋಯಲ್‌

Published:
Updated:

ನವದೆಹಲಿ: 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಸ್ಥಾನಗಳನ್ನು ಗೆಲ್ಲಲ್ಲಿದ್ದು, ಎನ್‌ಡಿಎ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ಪಿಯೂಶ್‌ ಗೊಯಲ್‌ ಶುಕ್ರವಾರ ಭವಿಷ್ಯ ನುಡಿದಿದ್ದಾರೆ. 

ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆ ಆಯೋಜಿಸಿದ್ದ ನಾಯಕತ್ವ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಎನ್‌ಡಿಎ ಸರ್ಕಾರ ಸಮತೋಲನ ಕಾಯ್ದುಕೊಂಡು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತ ಮತ್ತು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಆರ್ಥಿಕ ನೀತಿಗಳ ಪರಿಣಾಮ ಭಾರತದ ಅರ್ಥ ವ್ಯವಸ್ಥೆ ಬಲಗೊಂಡಿದೆ ಎಂದು ಪಿಯೂಶ್‌ ಗೊಯಲ್‌ ತಿಳಿಸಿದರು.  

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬ ಆರೋಪವನ್ನು ಪಿಯೂಶ್‌ ಗೊಯಲ್ ತಳ್ಳಿಹಾಕಿದರು. 

ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ, ಎರಡಂಕಿ ಇದ್ದ ಹಣದುಬ್ಬರ ಒಂದಂಕಿಗೆ ತಲುಪಿದೆ, ಬ್ಯಾಂಕಿಂಗ್ ವಲಯವನ್ನು ಬಲಪಡಿಸಲಾಗಿದೆ, ಕಳೆದ ಐದು ವರ್ಷಗಳಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕೇವಲ ಐದು ರೂಪಾಯಿ ಮಾತ್ರ ಕುಸಿತವಾಗಿರುವುದು ಎಂದು ಚಾವ್ಲಾ ತಿಳಿಸಿದರು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !