ಪರಸ್ಪರ ಚಪ್ಪಲಿಯಲ್ಲಿ ಹೊಡೆದುಕೊಂಡು ಜಗಳವಾಡಿದ ಬಿಜೆಪಿ ಸಂಸದ–ಶಾಸಕ

ಸೋಮವಾರ, ಮಾರ್ಚ್ 25, 2019
31 °C

ಪರಸ್ಪರ ಚಪ್ಪಲಿಯಲ್ಲಿ ಹೊಡೆದುಕೊಂಡು ಜಗಳವಾಡಿದ ಬಿಜೆಪಿ ಸಂಸದ–ಶಾಸಕ

Published:
Updated:

ಲಖನೌ: ಬಿಜೆಪಿಯ ಸಂಸದ ಶರದ್ ತ್ರಿಪಾಠಿ ಮತ್ತು ಶಾಸಕ ರಾಕೇಶ್ ಸಿಂಗ್ ಭಗೇಲ್ ಪರಸ್ಪರ ಚಪ್ಪಲಿಯಲ್ಲಿ ಹೊಡೆದುಕೊಂಡು ಜಗಳವಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಉತ್ತರಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ಬುಧವಾರ ಮೇಲ್ವಿಚಾರಣೆ ಮತ್ತು ನಿಗಾ ಸಮಿತಿ ಸಭೆಯಲ್ಲಿ ಈ ಘಟನೆ ನಡೆದಿದೆ.

ಸ್ಥಳೀಯ ರಸ್ತೆಯೊಂದರ ಶಂಕು ಸ್ಥಾಪನೆ ಮಾಡುವಾಗ ಅದರಲ್ಲಿ ತಮ್ಮ ಹೆಸರು ಯಾಕೆ ಬರೆದಿಲ್ಲ ಎಂದು ಸಂಸದ ಶರದ್ ತ್ರಿಪಾಠಿ ಕೇಳಿದ್ದರು. ಇದಕ್ಕೆ ಶಾಸಕ ರಾಕೇಶ್ ಭಗೇಲ್, ಇದು ನನ್ನ ನಿರ್ಧಾರ ಅಂದಿದ್ದರು. ಆ ಹೊತ್ತಲ್ಲಿ ಮಾತಿಗೆ ಮಾತು ಬೆಳೆದು ತ್ರಿಪಾಠಿ, ರಾಕೇಶ್‍ಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಕೇಶ್ ಕೂಡಾ ಚಪ್ಪಲಿಯಲ್ಲಿ ಹೊಡೆದಿದ್ದಾರೆ.

ಇಬ್ಬರು ಜನ ನಾಯಕರು ಕೆಟ್ಟ ಪದಗಳನ್ನು ಬಳಸಿ ಬೈಯುತ್ತಿರುವುದು ವಿಡಿಯೊ ದೃಶ್ಯದಲ್ಲಿದೆ. ಪೊಲೀಸರು ಮಧ್ಯಪ್ರವೇಶಿಸಿ ಈ ಜಗಳ ಬಿಡಿಸಿದ್ದಾರೆ.
 

ಬರಹ ಇಷ್ಟವಾಯಿತೆ?

 • 4

  Happy
 • 18

  Amused
 • 1

  Sad
 • 0

  Frustrated
 • 17

  Angry

Comments:

0 comments

Write the first review for this !