ಮಮತಾ ಬ್ಯಾನರ್ಜಿ ಅವರ ಚುನಾವಣಾ ಕ್ಷೇತ್ರದಲ್ಲಿ ಬಿಜೆಪಿ ಕಚೇರಿ ಧ್ವಂಸ

7

ಮಮತಾ ಬ್ಯಾನರ್ಜಿ ಅವರ ಚುನಾವಣಾ ಕ್ಷೇತ್ರದಲ್ಲಿ ಬಿಜೆಪಿ ಕಚೇರಿ ಧ್ವಂಸ

Published:
Updated:

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚುನಾವಣಾ ಕ್ಷೇತ್ರ ಭವಾನಿಪುರ್‌ನಲ್ಲಿ ಬಿಜೆಪಿ ಕಚೇರಿ ಧ್ವಂಸ ಮಾಡಲಾಗಿದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ವಿರೋಧಿಸಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಕೋಲ್ಕತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

 ಬಿಜೆಪಿಯನ್ನು ನೀವು ವಿರೋಧಿಸಿದರೆ  ಕೇಂದ್ರೀಯ ಸಂಸ್ಥೆಗಳು ನಿಮ್ಮ ಮೇಲೆ ದಾಳಿ ನಡೆಸುತ್ತವೆ: ಮಮತಾ
ನಮ್ಮಲ್ಲಿ  ಭಿನ್ನತೆಗಳು ಇರಬಹುದು. ಆದರೆ ನೀವು ಬಿಜೆಪಿಯನ್ನು ವಿರೋಧಿಸಿದರೆ ಕೇಂದ್ರೀಯ ಸಂಸ್ಥೆಗಳು ನಿಮ್ಮ ಮೇಲೆ ದಾಳಿ ನಡೆಸುತ್ತವೆ. ನಿಮ್ಮನ್ನು ಜೈಲಿಗೆ ತಳ್ಳುತ್ತವೆ. ನಿಮ್ಮನ್ನು ದೇಶದ್ರೋಹಿ ಎಂದು ಕರೆಯುತ್ತಾರೆ ಎಂದು ಧರಣಿ ಸತ್ಯಾಗ್ರಹ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇದೊಂದು ದೊಡ್ಡ ಸಮರ, ಇದಕ್ಕೆ ದೇಶದಾದ್ಯಂತವಿರುವ ಜನರಿಂದ ನಮಗೆ ಬೆಂಬಲ ಸಿಕ್ಕಿದೆ ಎಂದು ಹೇಳಿದ ಮಮತಾ ಈ ಪ್ರತಿಭಟನೆಯಿಂದಾಗಿ ಬಂಗಾಳ ಸರ್ಕಾರದ ಕೆಲಸಗಳು ಸ್ಥಗಿತಗೊಳ್ಳುವುದಿಲ್ಲ ಎಂದಿದ್ದಾರೆ. 

ನಮ್ಮ ಸತ್ಯಾಗ್ರಹ ಯಾವುದೇ ಸಂಸ್ಥೆ ವಿರುದ್ದ ಅಲ್ಲ. ಇದು ಮೋದಿ ಸರ್ಕಾರದ ಸರ್ವಾಧಿಕಾರದ ವಿರುದ್ಧ ಎಂದು ಮಮತಾ ಹೇಳಿದ್ದಾರೆ.

ಇದನ್ನೂ ಓದಿ: 

 ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರದ ನಡೆ ಅಪಾಯಕಾರಿ: ಕೇಜ್ರಿವಾಲ್

ಟಿಎಂಸಿ ಕಾರ್ಯಕರ್ತರಿಂದ ಪ್ರಧಾನಿ ಪ್ರತಿಕೃತಿ ದಹನ 

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಧೈರ್ಯವಿದೆಯೇ?: ಮೋದಿಗೆ ಮಮತಾ ಸವಾಲು

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !