ಶನಿವಾರ, ಜನವರಿ 25, 2020
28 °C

ನಿತ್ಯಾನಂದ ಪತ್ತೆಗೆ ಬ್ಲೂ ಕಾರ್ನರ್‌ ನೋಟಿಸ್?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ತಲೆಮರೆಸಿಕೊಂಡಿರುವ ನಿತ್ಯಾನಂದ ಸ್ವಾಮೀಜಿ ಪತ್ತೆಗೆ ‘ಬ್ಲೂ ಕಾರ್ನರ್‌ ನೋಟಿಸ್‌’ ಜಾರಿಗೊಳಿಸಲು ಗುಜರಾತ್‌ ರಾಜ್ಯ ಪೊಲೀಸರು ಈಗ ಇಂಟರ್‌ಪೋಲ್‌ಗೆ ಮನವಿ ಮಾಡಲಿದ್ದಾರೆ.

ಅಹಮದಾಬಾದ್‌ನ ಗ್ರಾಮೀಣ ಠಾಣೆ ಪೊಲೀಸರು ಈ ಕುರಿತು ರಾಜ್ಯದ ಅಪರಾಧ ತನಿಖಾ ದಳಕ್ಕೆ (ಸಿಐಡಿ) ಪತ್ರ ಬರೆದಿದ್ದಾರೆ. ನಿತ್ಯಾನಂದ ವಿರುದ್ಧದ ಅಪಹರಣ ಮತ್ತು ಕಾನೂನುಬಾಹಿರವಾಗಿ ಇರಿಸಿಕೊಂಡ ಆರೋಪ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ.  ತಲೆಮರೆಸಿಕೊಂಡಿರುವ ನಿತ್ಯಾನಂದನ ಪತ್ತೆಗೆ ಇದು ಅಗತ್ಯ ಎಂದು ಪತ್ರದಲ್ಲಿ ಕೋರಲಾಗಿದೆ ಎಂದು ಅಧಿಕಾರಿ ತಿಳಿಸಿದರು. ಸದಸ್ಯ ರಾಷ್ಟ್ರಗಳ ನಡುವೆ ಅಪರಾಧಿಗಳ ಮಾಹಿತಿ ವಿನಿಮಯ ಮಾಡಿಕೊಳ್ಳಲು ಬ್ಲೂ ಕಾರ್ನರ್‌ ನೋಟಿಸ್ ಕಡ್ಡಾಯವಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು