ಗುಜರಾತಿನ ಮೂರು ಗ್ರಾಮಗಳಲ್ಲಿ ಮದುವೆ ದಿನ ವರನ ತಂಗಿಯನ್ನು ವರಿಸುತ್ತಾಳೆ ವಧು! 

ಭಾನುವಾರ, ಜೂನ್ 16, 2019
22 °C

ಗುಜರಾತಿನ ಮೂರು ಗ್ರಾಮಗಳಲ್ಲಿ ಮದುವೆ ದಿನ ವರನ ತಂಗಿಯನ್ನು ವರಿಸುತ್ತಾಳೆ ವಧು! 

Published:
Updated:

ಚೋಟಾ ಉದೇಪುರ್ : ಇಲ್ಲಿನ ಸುರ್‌ಖೇದಾ, ಸನಾದ ಮತ್ತು ಅಂಬಾಲ್ ಎಂಬ ಬುಡಕಟ್ಟು ಜನಾಂಗದ ಗ್ರಾಮದಲ್ಲಿ ವಿಶೇಷವಾದ ಸಂಪ್ರದಾಯವೊಂದಿದೆ.ಇಲ್ಲಿ ನಡೆಯುವ ಮದುವೆಗಳಲ್ಲಿ ಮದುಮಗ ಭಾಗಿಯಾಗುವುದಿಲ್ಲ. ಆತನ ಬದಲು ಅವಿವಾಹಿತೆಯಾಗಿರುವ ಸಹೋದರಿ ಅಥವಾ ಸಂಬಂಧಿಕರ ಹುಡುಗಿಯನ್ನು ವಧುವನ್ನು ವರಿಸುತ್ತಾಳೆ.

ಈ ಊರಿನ ದೇವರುಗಳ ಅವಿವಾಹಿತರು ಎಂಬ ನಂಬಿಕೆ ಇಲ್ಲಿದೆ. ಈ ಅವಿವಾಹಿತ ದೇವರುಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಇಲ್ಲಿ ಮದುವೆ ಗಂಡು ತನ್ನ ಮದುವೆಯಲ್ಲಿ ಭಾಗಿಯಾಗುವುದಿಲ್ಲ. ಮದುಮಗನಿಗೆ ಯಾವುದೇ ದೋಷ ತಟ್ಟದಂತೆ ಆತನನ್ನು ಸಿಂಗರಿಸಿ ಮನೆಯಲ್ಲಿಯೇ ಕೂರಿಸಲಾಗುತ್ತದೆ.

ಮದುವೆಯದಿನ ಮದುವೆ ಗಂಡಿನ ಬದಲು ಆತನ ಅವಿವಾಹಿತ ಸೋದರಿ ಸಿಂಗರಿಸಿ, ವಾದ್ಯಘೋಷಗಳಿಂದ ಕೂಡಿದ
ದಿಬ್ಬಣದೊಂದಿಗೆ ವಧುವಿನ ಮನೆಗೆ ಹೋಗುತ್ತಾಳೆ. ಅಲ್ಲಿ ಆಕೆ ವಧುವನ್ನು ವರಿಸಿ ಮನೆಗೆ ಕರೆದುಕೊಂಡು ಬರುತ್ತಾಳೆ.

ಮದುವೆಯಲ್ಲಿ  ಮದುಮಗ ಮಾಡುವ ಎಲ್ಲ ಕಾರ್ಯಗಳನ್ನು ಆತನ ಸಹೋದರಿಯೇ ನಿರ್ವಹಿಸುತ್ತಾಳೆ. ಮಾಂಗಲ್ಯಧಾರಣೆ, ಸಪ್ತಪದಿ ಎಲ್ಲವೂ ಇಲ್ಲಿ ನಡೆಯುತ್ತದೆ ಅಂತಾರೆ ಸುರ್‌ಖೇದ ಗ್ರಾಮದ ನಿವಾಸಿಗಳು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !