ತೇಜಸ್ವಿ ವಿರುದ್ಧ ಮೀಟೂ: ಬ್ರಿಜೇಶ್ ಕಾಳಪ್ಪ ವಿರುದ್ಧ ಕಾನೂನು ಸಮರ–ಸೋಮದತ್ತ

ಶುಕ್ರವಾರ, ಏಪ್ರಿಲ್ 26, 2019
24 °C

ತೇಜಸ್ವಿ ವಿರುದ್ಧ ಮೀಟೂ: ಬ್ರಿಜೇಶ್ ಕಾಳಪ್ಪ ವಿರುದ್ಧ ಕಾನೂನು ಸಮರ–ಸೋಮದತ್ತ

Published:
Updated:

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್‌ ವಕ್ತಾರ ಬ್ರಿಜೇಶ್ ಕಾಳಪ್ಪ ಆಡಿಯೋ ರಿಲೀಸ್ ಮಾಡಿರುವುದರ ವಿರುದ್ಧ ತೇಜಸ್ವಿ ಗೆಳತಿ ಸೋಮದತ್ತ ಕಿಡಿ ಕಾರಿದ್ದಾರೆ. 

ಭಾನುವಾರ ಬ್ರಿಜೇಶ್ ಕಾಳಪ್ಪ ಮಾಧ್ಯಮ ಗೋಷ್ಠಿ ನಡೆಸಿ ತೇಜಸ್ವಿ ಸೂರ್ಯ ಗೆಳತಿ ಸೋಮದತ್ತ ಮಾತನಾಡಿರುವ ಆಡಿಯೋ ರಿಲೀಸ್ ಮಾಡಿದ್ದರು. ಇದರಲ್ಲಿ ತೇಜಸ್ವಿ ಸೂರ್ಯ ಮೂವರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. 

ಈ ಪ್ರಕರಣ ಸಂಬಂಧ ಟ್ವೀಟ್‌ ಮಾಡಿರುವ ಸೋಮದತ್ತ ’ರಾಜಕೀಯ ಲಾಭಕ್ಕಾಗಿ ಮಹಿಳೆಯರ ಗೌರವ, ಘನತೆಗೆ ಧಕ್ಕೆ ತರುತ್ತಿರುವ ಬ್ರಿಜೇಶ್ ಕಾಳಪ್ಪಾಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಗೌರವ ಹಾಗೂ ಘನತೆಗೆ ಧಕ್ಕೆ ತಂದಿರುವ ಬ್ರಿಜೇಶ್ ಕಾಳಪ್ಪ ವಿರುದ್ಧ ಕಾನೂನು ಸಮರ ನಡೆಸುವುದಾಗಿ ಅವರು ಹೇಳಿದ್ದಾರೆ. 

‘ಇತ್ತೀಚೆಗೆ ಸಿ.ಡಿ ಒಂದು ಬಿಡುಗಡೆಯಾಗಿದ್ದು, ಅದರಲ್ಲಿ ತಾನು ಸೇರಿದಂತೆ ಮೂವರು ಮಹಿಳೆಯರ ಮೇಲೆ ತೇಜಸ್ವಿ ಸೂರ್ಯ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆದರೆ, ಈ ವಿಷಯವನ್ನು ತೇಜಸ್ವಿ ಬಹಿರಂಗಪಡಿಸಿಲ್ಲ’ ಎಂದು ಬ್ರಿಜೇಶ್‌ ಕಾಳಪ್ಪ ಆರೋಪಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 15

  Happy
 • 2

  Amused
 • 1

  Sad
 • 4

  Frustrated
 • 10

  Angry

Comments:

0 comments

Write the first review for this !