ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌–4 ವಾಹನಗಳ ಮಾರಾಟಕ್ಕೆ ಹೆಚ್ಚುವರಿ ಅವಕಾಶ

Last Updated 28 ಮಾರ್ಚ್ 2020, 3:41 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ್ ಸ್ಟೇಜ್‌–4 (ಬಿಎಸ್‌–4) ಪರಿಮಾಣದ ವಾಹನಗಳನ್ನು, ಹೆಚ್ಚುವರಿಯಾಗಿ 10 ದಿನ ಮಾರಾಟ ಮಾಡಲು ಸುಪ್ರೀಂ ಕೋರ್ಟ್‌ ಅವಕಾಶ ನೀಡಿದೆ. ಆದರೆ, ದೆಹಲಿಯಲ್ಲಿ ಪೂರ್ವನಿಗದಿಯಂತೆ ಏಪ್ರಿಲ್ 1ರಿಂದಲೇ ಬಿಎಸ್‌–4 ವಾಹನಗಳನ್ನು ಮಾರಾಟ ಮಾಡುವಂತಿಲ್ಲ.

ದೇಶದಾದ್ಯಂತ 2020ರ ಏಪ್ರಿಲ್‌ 1ರ ನಂತರ ಬಿಎಸ್‌–6 ಪರಿಮಾಣ ಜಾರಿಗೆ ಬರಲಿದೆ. ಅಂದಿನಿಂದ ಬಿಎಸ್‌–4 ವಾಹನಗಳನ್ನು ಮಾರಾಟ ಮಾಡುವಂತಿಲ್ಲ. ಆದರೆ, ಲಾಕ್‌ಡೌನ್‌ ಜಾರಿಯಲ್ಲಿ ಇರುವುದರಿಂದ ಡೀಲರ್‌ಗಳು ತಮ್ಮ ಬಳಿ ಇರುವ ಬಿಎಸ್‌–4 ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ.

ಹೀಗಾಗಿ ಏಪ್ರಿಲ್ 1ರ ನಂತರವೂ ಈ ವಾಹನಗಳನ್ನು ಮಾರಾಟ ಮಾಡಲು ಅವಕಾಶ ಕೊಡುವಂತೆ ವಾಹನ ಮಾರಾಟಗಾರರ ಒಕ್ಕೂಟವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

* ಡೀಲರ್‌ಗಳು ತಮ್ಮ ಬಳಿ ಉಳಿದಿರುವ ಬಿಎಸ್‌–4 ವಾಹನಗಳ ವಿವರವನ್ನು ಒಂದು ವಾರದ ಒಳಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು

* ಲಾಕ್‌ಡೌನ್‌ ಅವಧಿ ಮುಗಿದ ನಂತರದ 10 ದಿನಗಳವೆರೆಗೆ ಬಿಎಸ್‌–4 ವಾಹನಗಳನ್ನು ಮಾರಾಟ ಮಾಡಬಹುದು

* ಈಗಾಗಲೇ ಖರೀದಿಸಲಾಗಿರುವ ಬಿಎಸ್‌–4 ವಾಹನಗಳನ್ನು ನೋಂದಣಿ ಮಾಡಿಸದೇ ಇದ್ದರೆ, ಅವುಗಳನ್ನು 2020ರ ಏಪ್ರಿಲ್ ಅಂತ್ಯ ಅಥವಾ ಮೇ ಅಂತ್ಯದವರೆಗೂ ನೋಂದಣಿ ಮಾಡಿಸಬಹುದಾಗಿದೆ. ಲಾಕ್‌ಡೌನ್ ಯಾವಾಗ ವಾಪಸ್ ಪಡೆಯಲಾಗುತ್ತದೆ ಎಂಬುದನ್ನು ಇದು ಅವಲಂಬಿಸಿದೆ

* ಮಾರಾಟವಾಗದೇ ಉಳಿದಿರುವ ಬಿಎಸ್‌–4 ವಾಹನಗಳ ಒಟ್ಟು ಸಂಖ್ಯೆಯಲ್ಲಿ ಶೇಕಡ 10 ರಷ್ಟು ವಾಹನಗಳನ್ನು ಮಾತ್ರ ಈ ಹೆಚ್ಚುವರಿ ಅವಧಿಯಲ್ಲಿ ಮಾರಾಟ ಮಾಡಬೇಕು


1.7 ಲಕ್ಷ ಬಿಎಸ್‌–4 ಕಾರುಗಳು ಮಾರಾಟವಾಗದೇ ಉಳಿದಿವೆ

14,000 ವಾಣಿಜ್ಯ ವಾಹನಗಳು ಮಾರಾಟವಾಗದೇ ಉಳಿದಿವೆ

₹ 7,000 ಕೋಟಿ ಮಾರಾಟವಾಗದೇ ಉಳಿದಿರುವ ಬಿಎಸ್–4 ವಾಹನಗಳ ಎಕ್ಸ್‌ ಷೋರೂಂ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT