ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ದಿನಗಳಲ್ಲಿ 3,026 ಅಂಶ ಕುಸಿದ ಬಿಎಸ್‌ಇ

Last Updated 2 ಮಾರ್ಚ್ 2020, 19:16 IST
ಅಕ್ಷರ ಗಾತ್ರ

ಮುಂಬೈ: ಷೇರುಪೇಟೆಯ ದಿನದ ವಹಿವಾಟು ಸೋಮವಾರ ಭಾರಿ ಏರಿಳಿತ ಅನುಭವಿಸಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರ 786 ಅಂಶಗಳ ಜಿಗಿತ ಕಂಡು ದಿನದ ಗರಿಷ್ಠವಾದ 39,083 ಅಂಶಗಳಿಗೆ ತಲುಪಿತ್ತು. ಆ ಬಳಿಕ 939 ಅಂಶಗಳಷ್ಟು ಕುಸಿತ ಕಂಡಿತು. ವಹಿವಾಟಿನ ಅಂತ್ಯದ ವೇಳೆಗೆ 53 ಅಂಶಗಳ ಇಳಿಕೆಯೊಂದಿಗೆ 38,144 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ
₹ 1.07 ಲಕ್ಷ ಕೋಟಿ ಕರಗಿದೆ.

ಏಳು ದಿನಗಳ ವಹಿವಾಟು ಅವಧಿಯಲ್ಲಿ ಸೂಚ್ಯಂಕ 3,026 ಅಂಶಗಳಷ್ಟು ಕುಸಿತ ಕಂಡಿದೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 52 ಪೈಸೆಗಳಷ್ಟು ಕುಸಿತ ಕಂಡು ಒಂದು ಡಾಲರ್‌ಗೆ ₹ 72.74ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT