ಮಾಯಾವತಿ ಚಿತ್ರವೇ ದೊಡ್ಡದಾಗಿರಬೇಕು

ಬುಧವಾರ, ಮಾರ್ಚ್ 20, 2019
23 °C
ಚುನಾವಣಾ ಪೋಸ್ಟರ್ * ಪಕ್ಷದ ನಾಯಕರಿಗೆ ಬಿಎಸ್‌ಪಿಯಿಂದ ಸೂಚನೆ

ಮಾಯಾವತಿ ಚಿತ್ರವೇ ದೊಡ್ಡದಾಗಿರಬೇಕು

Published:
Updated:
Prajavani

ಲಖನೌ: ಬಿಎಸ್‌ಪಿ ನಾಯಕರು ಚುನಾವಣಾ ಪ್ರಚಾರದ ಹೋರ್ಡಿಂಗ್ ಮತ್ತು ಪೋಸ್ಟರ್‌ಗಳಲ್ಲಿ ತಮ್ಮ ಚಿತ್ರಗಳನ್ನು ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ಚಿತ್ರಕ್ಕೆ ಸರಿಸಮನಾದ ಅಥವಾ ಅದಕ್ಕಿಂತ ದೊಡ್ಡ ಗಾತ್ರದಲ್ಲಿ ಹಾಕಿಕೊಳ್ಳಬಾರದು ಎಂದು ಪಕ್ಷವು ಸೂಚನೆ ನೀಡಿದೆ.

‘ಲೋಕಸಭಾ ಟಿಕೆಟ್ ಆಕಾಂಕ್ಷಿಗಳು ಮತ್ತು ಸಂಭಾವ್ಯ ಅಭ್ಯರ್ಥಿಗಳು ಪೋಸ್ಟರ್‌ಗಳಲ್ಲಿ ತಮ್ಮ ಚಿತ್ರಗಳನ್ನು ಬೆಹೆನ್‌ಜೀ (ಮಾಯಾವತಿ) ಅವರ ಚಿತ್ರಕ್ಕಿಂತ ದೊಡ್ಡ ಗಾತ್ರದಲ್ಲಿ ಹಾಕಿಕೊಂಡಿರುವುದು ಪಕ್ಷದ ಗಮನಕ್ಕೆ ಬಂದಿದೆ. ಇದನ್ನು ಅಶಿಸ್ತು ಎಂದು ಪರಿಗಣಿಸಲಾಗುತ್ತದೆ. ತಮ್ಮ ಚಿತ್ರಗಳನ್ನೇ ದೊಡ್ಡದಾಗಿ ಹಾಕಿಕೊಳ್ಳುವವರ ವಿರುದ್ಧ ಶಿಸ್ತುಕ್ರಮ ತೆಗದುಕೊಳ್ಳಲಾಗುತ್ತದೆ’ ಎಂದು ಪಕ್ಷವು ಎಚ್ಚರಿಕೆ ನೀಡಿದೆ.

‘ಹೋರ್ಡಿಂಗ್‌/ಪೋಸ್ಟರ್‌ಗಳಲ್ಲಿ ಬೆಹೆನ್‌ಜೀ ಅವರ ಚಿತ್ರದ ಜತೆಗೆ ಪಕ್ಷದ ಚಿನ್ಹೆ ಮತ್ತು ಪಕ್ಷದ ಸಂಸ್ಥಾಪಕ ಕಾಂಶೀರಾಮ್ ಅವರ ಚಿತ್ರವನ್ನು ಹಾಕಿಕೊಳ್ಳಬೇಕು’ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

‘ಬಿಎಸ್‌ಪಿ ನಾಯಕರು ತಮ್ಮ ಚುನಾವಣಾ ಪ್ರಚಾರ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿ ಸಮಾಜವಾದಿ ಪಕ್ಷದ ಸ್ಥಳೀಯ ನಾಯಕರ ಹೆಸರನ್ನು ಮುದ್ರಿಸಬೇಕು. ಅವರನ್ನು ಪ್ರಚಾರಕ್ಕೆ ಆಹ್ವಾನಿಸಬೇಕು’ ಎಂದು ಪಕ್ಷವು ಹೇಳಿದೆ.

ಬರಹ ಇಷ್ಟವಾಯಿತೆ?

 • 1

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !