ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್ | ಗುರುವಾರ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ ಕೆ.ವಿ.ಸುಬ್ರಮಣಿಯನ್‌

Last Updated 2 ಜುಲೈ 2019, 10:39 IST
ಅಕ್ಷರ ಗಾತ್ರ

ನವದೆಹಲಿ:ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ನರೇಂದ್ರ ಮೊದಿ ನೇತೃತ್ವದ ಹೊಸ ಸರ್ಕಾರದ ಮೊದಲ ಆರ್ಥಿಕ ಸಮೀಕ್ಷೆಯನ್ನು ಸಂಸತ್‌ನಲ್ಲಿ ಗುರುವಾರ(ಜೂನ್ 4) ಮಂಡಿಸಲಿದ್ದಾರೆ.

ಮೋದಿ ಅವರ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರ ಮಂಡಿಸುತ್ತಿರುವ ಕೇಂದ್ರ ಬಜೆಟ್‌ಗೂ ಮುನ್ನಾ ದಿನ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ.

‘ಗುರುವಾರ ಸಂಸತ್‌ನಲ್ಲಿ ನನ್ನ ಪಾಲಿಗೆ ಅತ್ಯಂತ ಪ್ರಮುಖವಾದ ಹಾಗೂ ನೂತನ ಸರ್ಕಾರದ ಮೊದಲ ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡಲು ಉತ್ಸಾಹದಿಂದ ಎದುರು ನೊಡುತ್ತಿದ್ದೇನೆ ಎಂದು’ ಕೃಷ್ಣಮೂರ್ತಿ ಸುಬ್ರಮಣಿಯನ್‌ ಅವರು ಮಂಗಳವಾರ #EcoSurvey2019 ನೊಂದಿಗೆ ಟ್ವೀಟ್‌ ಮಾಡಿದ್ದಾರೆ.

ಆರ್ಥಿಕ ಸಮೀಕ್ಷೆಯು ಆರ್ಥಿಕ ಬೆಳವಣಿಗೆಯ ಒಂದು ದೃಷ್ಟಿಕೋನವಾಗಿದ್ದು, ಇದನ್ನು ಕೇಂದ್ರ ಬಜೆಟ್‌ಗೂ ಒಂದು ದಿನ ಮೊದಲೇ ಪ್ರಸ್ತುತ ಪಡಿಸಲಾಗುತ್ತದೆ.

ಸಮೀಕ್ಷೆಯು ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳ ಸಾರಾಂಶವನ್ನು ಹೊಂದಿದೆ, ಜತೆಗೆ ಸರ್ಕಾರದ ನೀತಿ ಉಪಕ್ರಮಗಳು ಮತ್ತು ಆರ್ಥಿಕ ಮುನ್ನೋಟವನ್ನು ಒಳಗೊಂಡಿದೆ.

ಕೃಷ್ಣಮೂರ್ತಿ ಸುಬ್ರಮಣಿಯನ್‌ ಅವರು 2018ರ ಡಿಸೆಂಬರ್‌ನಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕವಾಗಿದ್ದರು. ಇದಕ್ಕೂ ಮೊದಲು ಆ ಸ್ಥಾನದಲ್ಲಿದ್ದ ಅರವಿಂದ್‌ ಸುಬ್ರಮಣಿಯನ್ ಅವರು ತಮ್ಮ ಕೌಟುಂಬಿಕ ವಿಷಯಗಳ ಕಾರಣಕ್ಕೆ ಅಧಿಕಾರದಿಂದ ಕೆಳಗಿಳಿದಿದ್ದರು. ಆರು ತಿಂಗಳ ಬಳಿಕ ಈ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು.

ಕೇಂದ್ರದ ನೂತನ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್‌ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ(ಜೂನ್‌ 5) ಮಂಡಿಸಲಿದ್ದಾರೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT