ಹಿಮಾಚಲದಲ್ಲಿ ಬಹುಮಹಡಿ ಕಟ್ಟಡ ಕುಸಿತ: 2 ಸಾವು, ಅವಶೇಷಗಳಡಿಯಲ್ಲಿ ಸಿಲುಕಿದ ಯೋಧರು

ನವದೆಹಲಿ: ಹಿಮಾಚಲ ಪ್ರದೇಶದ ಸೋಲಾನ್ ಎಂಬಲ್ಲಿ ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದು ಇಬ್ಬರು ಸಾವಿಗೀಡಾಗಿದ್ದಾರೆ. ಭಾನುವಾರ ಸಂಜೆ ಈ ಘಟನೆ ಸಂಭವಿಸಿದ್ದು, ಕಟ್ಟಡದ ಅವಶೇಷಗಳಡಿಯಲ್ಲಿ ಹಲವಾರು ಯೋಧರು ಮತ್ತು ಅವರ ಕುಟುಂಬದವರು ಸಿಲುಕಿದ್ದಾರೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.
ಎಎನ್ಐ ಸುದ್ದಿಸಂಸ್ಥೆಯ ಪ್ರಕಾರ, ಘಟನೆ ವೇಳೆ ಕಟ್ಟಡದಲ್ಲಿ 30 ಯೋಧರು ಮತ್ತು 7 ನಾಗರಿಕರು ಇದ್ದರು. 18 ಯೋಧರು ಮತ್ತು 5 ನಾಗರಿಕರನ್ನು ರಕ್ಷಿಸಲಾಗಿದೆ. ಎರಡು ಮೃತದೇಹ ಪತ್ತೆಯಾಗಿದ್ದು 14 ಮಂದಿ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿರುವುದಾಗಿ ಶಂಕಿಸಲಾಗಿದೆ.
#HimachalPradesh: The building that collapsed in Kumarhatti was a 'Dhaba'. 30 Army men & 7 civilians were present at the spot. 18 Army men & 5 civilian rescued. 2 bodies recovered. 14 feared trapped; rescue operations continue pic.twitter.com/6L3EvfELt9
— ANI (@ANI) July 14, 2019
Director cum Special Secretary Revenue & Disaster Management, DC Rana: Two people dead & 22 have been rescued after a building collapsed in Kumarhatti, earlier today. #HimachalPradesh https://t.co/gzTlNicxmm
— ANI (@ANI) July 14, 2019
ಈಗಾಗಲೇ 19 ಮಂದಿಯನ್ನು ರಕ್ಷಿಸಿದ್ದು, ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ಮುಂದವರಿಸಿದ್ದು, ಇನ್ನೊಂದು ತಂಡ ಅಲ್ಲಿಗೆ ಧಾವಿಸಿದೆ.
ರೆಸ್ಟುರಾ ಹೊಂದಿರುವ ಬಹುಮಹಡಿ ಕಟ್ಟಡ ಮಳೆಯಿಂದಾಗಿ ಕುಸಿದು ಬಿದ್ದಿದೆ ಎಂದು ಪಿಟಿಐ ವರದಿ ಮಾಡಿದೆ.
ಯೋಧರು ಮತ್ತು ಅವರ ಕುಟುಂಬದವರು ಉತ್ತರಾಖಂಡಕ್ಕೆ ಹೋಗುತ್ತಿದ್ದ ದಾರಿಯಲ್ಲಿ ಮಧ್ಯಾಹ್ನದ ಊಟ ಮಾಡಲು ಈ ರೆಸ್ಟುರಾಗೆ ಬಂದಿದ್ದರು ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಹೇಳಿರುವುದಾಗಿ ಪಿಟಿಐ ವರದಿಯಲ್ಲಿ ಹೇಳಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.