ಭಾನುವಾರ, ಆಗಸ್ಟ್ 18, 2019
26 °C

ಅಡ್ಡ ಬಂದ ಮಹಿಳೆಯ ಜೀವ ಉಳಿಸಲು ಹೋಗಿ ಹಳ್ಳಕ್ಕೆ ಜಾರಿದ ಬಸ್‌: 14 ಮಕ್ಕಳಿಗೆ ಗಾಯ

Published:
Updated:

ಪಾಲ್‌ಘರ್‌(ಮಹಾರಾಷ್ಟ್ರ): ಮಹಿಳೆಯ ಜೀವ ಉಳಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡ ಬಸ್‌ವೊಂದು ರಸ್ತೆಯಿಂದ ಜಾರಿ ಹಳ್ಳಕ್ಕಿಳಿದಿದ್ದು, 14 ಮಕ್ಕಳು ಗಾಯಗೊಂಡಿರುವ ದುರಂತ ವಡಾ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದೆ.

ಪಿವ್ಲಿ ಮತ್ತು ವಾಡಾ ಮಾರ್ಗದಲ್ಲಿ ಬೆಳಿಗ್ಗೆ 6.30ರ ಸುಮಾರಿಗೆ ಅವಘಡ ಸಂಭವಿಸಿದ್ದು, ಬಸ್‌ನಲ್ಲಿ 49 ಮಕ್ಕಳು ಇದ್ದರು. ಗಾಯಗೊಂಡಿರುವ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆಯೊಬ್ಬರು ಏಕಾಏಕಿ ಬಸ್‌ಗೆ ಅಡ್ಡಲಾಗಿ ಬಂದ ಪರಿಣಾಮ, ಅವರ ಜೀವ ಉಳಿಸಲು ಚಾಲಕ ಪ್ರಯತ್ನಿಸಿದ್ದಾರೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬಸ್‌ ರಸ್ತೆಯಿಂದ ಜಾರಿ ಹಳ್ಳಕ್ಕೆ ಇಳಿದಿದೆ. ಹೀಗಾಗಿ ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

Post Comments (+)