ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ತಂಡಗಳು ಮುಂದಿನ ಹಂತಕ್ಕೆ

ಕುಲ್ಲೇಟಿರ ಕಪ್ ಹಾಕಿ ಟೂರ್ನಿ
Last Updated 12 ಮೇ 2018, 10:07 IST
ಅಕ್ಷರ ಗಾತ್ರ

ನಾಪೋಕ್ಲು : ಕೊಡವ ಕುಟುಂಬಗಳ ನಡುವೆ ನಾಪೋಕ್ಲು ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಿತ್ತಿರುವ 22 ನೇ ವರ್ಷದ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ಪರದಂಡ, ಬೊವ್ವೇರಿಯಂಡ, ಅಂಜಪರುವಂಡ, ಮೂಕೋಂಡ, ಕೊಂಗಂಡ, ಕಂಭಿರಂಡ, ಮುಕ್ಕಾಟೀರ, ಮಚ್ಚಂಡ. 8 ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿದವು.

ಮೈದಾನ ಒಂದರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ತಂಡವನ್ನು ಕಳೆದ ಬಾರಿಯ ರನ್ನರ್ಸ್ ಪರದಂಡ ತಂಡವು 2-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದು ಕೊಂಡಿತು, ಪರದಂಡ ತಂಡದ ಬೋಪಣ್ಣ ಅಕರ್ಷಕ 2 ಗೋಲು ಬಾರಿಸಿದರು.

ನಂತರದ ಪಂದ್ಯದಲ್ಲಿ ಬೊವ್ವೇರಿಯಂಡ ತಂಡವು ಪಟ್ಟಡ ತಂಡವನ್ನು 2-1 ಗೋಲುಗಳಿಂದ ಮಣಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆಯಿತು, ಆಟದ ಪ್ರಾರಂಭದಲ್ಲಿಯೆ ಬೊವ್ವೇರಿಯಂಡ ತಂಡ ಧಾಳಿ ನಡೆಸಿ ಸಚಿನ್ ಮುತ್ತಣ್ಣನವರ ಮೊದಲ ಗೋಲುನೊಂದಿಗೆ 1 ಗೋಲುಗಳ ಮುನ್ನಡೆ ಸಾಧಿಸಿತು. ಪಟ್ಟಡ ತಂಡದ ಶರತ್ ಗೋಲು ಹೊಡೆಯುವುದರ ಮೂಲಕ ತಂಡವು ಸಮಬಲ ಸಾಧಿಸುವಂತೆ ಮಾಡಿತು ನಂತರ ಬೊವ್ವೇರಿಯಂಡ ಜೀತನ್ ಕಾಳಪ್ಪ ಬಾರಿಸಿದ ಗೋಲಿನಿಂದ ಬೊವ್ವೇರಿಯಂಡ ತಂಡವು ಮುಂದಿನ ಹಂತಕ್ಕೆ ಪ್ರವೇಶಿಸಿತು. ಮೂರನೇ ಪಂದ್ಯದಲ್ಲಿ ಮುಕ್ಕಾಟೀರ ತಂಡವು ಕಾಂಡಂಡ ತಂಡವನ್ನು 1-0 ಗೋಲುಗಳಿಂದ ಸೋಲಿಸಿತು.ನಂತರದ ಪಂದ್ಯದಲ್ಲಿ ಮಚ್ಚಂಡ ತಂಡವು ಕರ್ತಮಾಡ ತಂಡವನ್ನು 1-0 ಗೋಲುಗಳಿಂದ ಮಣಿಸಿ ಮುಂದಿನ ಹಂತ ತಲುಪಿತು ಮಚ್ಚಂಡ ಪರ ಪ್ರೀನ್ಸ್ ಗೋಲುಗಳಿಸಿ ಮಿಂಚಿದರು.

ಮೈದಾನ ಎರಡರಲ್ಲಿ ನಡೆದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಅಂಜಪರುವಂಡ ತಂಡ ಮೈದಾನಕ್ಕೆ ಇಳಿಯಿತು. ಆದರೆ ಬೇಪ್ಪುಡಿಯಂಡ ತಂಡ ಬಾರದೇ ಇದ್ದುದರಿಂದ ಮಾಜಿ ಚಾಂಪಿಯನ್ ಅಂಜಪರುವಂಡ ತಂಡವು ಮುಂದಿನ ಹಂತಕ್ಕೆ ಪ್ರವೇಶಿಸಿತು.ನಂತರದ ಪಂದ್ಯದಲ್ಲಿ ಕಡೇಮಾಡ ತಂಡವು ಮೂಕೋಂಡ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಹೋಯಿತು ಉಭಯ ಕಡೆಯ ಆಟಗಾರರು ಗೆಲುವಿಗೆ ಹೋರಾಟ ನಡೆಸಿದರು ಕೊನೆಯಲ್ಲಿ ಕಡೇಮಾಡ ಪವನ್ ಬೋಪಣ್ಣ ಗಳಿಸಿದ 1 ಗೋಲಿನಿಂದ ತಂಡವು ಗೆಲುವು ಸಾಧಿಸಿತು.
ಮೂರನೇ ಪಂದ್ಯಾಟದಲ್ಲಿ ಕೋಂಗಂಡ ತಂಡವು ಚೋಕಿರ ತಂಡವನ್ನು 3-1 ಗೋಲುಗಳಿಂದ ಮಣಿಸಿತು ಪಂದ್ಯದ ಆರಂಭದಲ್ಲಿ ಎರಡು ತಂಡಗಳು ಬಿರುಸಿನ ಆಟ ಪ್ರದರ್ಶಸಿದರು. ಕೋಂಗಂಡ ಪರ ಪೂವಣ್ಣ 2 ಗೋಲು ಹೊಡೆದರೆ ಮಹಿಂದ್ರ 1 ಗೋಲು ಹೊಡೆದು ಮಿಂಚಿದರು. ಚೋಕಿರ ಪರ ಅಕ್ಷೀತ್ 1 ಗೋಲು ಹೊಡೆದು ಅಂತರವನ್ನು ತಗ್ಗಿಸಿ ಕೊಂಡರು.

ನಂತರದ ಪಂದ್ಯದಲ್ಲಿ ಕಂಭಿರಂಡ ತಂಡವು ಕೊಂಡೀರ ತಂಡವನ್ನು 2-0 ಗೋಲುಗಳಿಂದ ಮಣಿಸಿ ಮುಂದಿನ ಹಂತ ಪ್ರವೇಶಿಸಿತು.

ಕಂಭಿರಂಡ ಪರ ಮಹಿಮ್ ಮೊಣ್ಣಪ್ಪ, ರಾಯ್ ಜಗದೀಶ್, ಗೋಲುಗಳಿಸಿ ಮಿಂಚಿದರು. ತಾರೀಕು 12 ರಂದು ವಿಧಾನ ಸಭಾ ಚುನಾವಣೆ ಇರುವುದರಿಂದ ಮುಂದಿನ ಪಂದ್ಯಾಟವನ್ನು ತಾರೀಕು 13 ರ ಭಾನುವಾರದಂದು ನಡೆಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT