ನಿರುದ್ಯೋಗ ಭತ್ಯೆ ವಿತರಣೆಗೆ ಚಾಲನೆ ನೀಡಿದ ಚಂದ್ರ ಬಾಬು ನಾಯ್ಡು

7

ನಿರುದ್ಯೋಗ ಭತ್ಯೆ ವಿತರಣೆಗೆ ಚಾಲನೆ ನೀಡಿದ ಚಂದ್ರ ಬಾಬು ನಾಯ್ಡು

Published:
Updated:

ಹೈದರಾಬಾದ್‌: ನಿರುದ್ಯೋಗಿ ಯುವಕರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಆಂಧ್ರ ಪ್ರದೇಶದಲ್ಲಿ ಪ್ರತಿ ತಿಂಗಳು ₹1,000 ನಿರುದ್ಯೋಗ ಭತ್ಯೆ ನೀಡುವ ‘ಮುಖ್ಯಮಂತ್ರಿ ಯುವ ನೇಸ್ತಂ’ ಯೋಜನೆಗೆ ಮುಖ್ಯಮಂತ್ರಿ ಎನ್‌.ಚಂದ್ರ ಬಾಬು ನಾಯ್ಡು ಚಾಲನೆ ನೀಡಿದರು.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಂದ ಬಂದಿರುವ ಪದವೀಧರ ನಿರುದ್ಯೋಗಿ ಯುವಕರಿ ಗೆ ಸೂಕ್ತ ಉದ್ಯೋಗ ದೊರಕುವವರೆಗೆ ಆರ್ಥಿಕ ಭದ್ರತೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ತೆಲುಗು ದೇಶಂ ಪಕ್ಷ (ಟಿಡಿಪಿ) 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಈ ಯೋಜನೆ ಕುರಿತು ಘೋಷಣೆ ಮಾಡಿತ್ತು.

ಸದ್ಯ 2.07 ಲಕ್ಷ ನಿರುದ್ಯೋಗಿ ಯುವಕರು ಹೆಸರನ್ನು ನೋಂದಾಯಿ ಸಿದ್ದಾರೆ. ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಭತ್ಯೆ ಸಂದಾಯ ವಾಗಲಿದೆ. ಮೊದಲನೇ ತಿಂಗಳಿನ ಭತ್ಯೆ ಬುಧವಾರ (ಅಕ್ಟೋಬರ್‌ 3ರಂದು)ಜಮೆ ಆಗಲಿದೆ.

*

ಅಮರಾವತಿಯನ್ನು ಹೈದರಾಬಾದ್‌ಗಿಂತ ಉತ್ತಮ ನಗರವನ್ನಾಗಿಸುವುದು ನನ್ನ ಸದ್ಯದ ಕನಸು. ಇದನ್ನು ಸಾಧಿಸಿಯೇ ತೀರುತ್ತೇನೆ
ಎನ್‌.ಚಂದ್ರಬಾಬು ನಾಯ್ಡು, ಆಂಧ್ರ ಪ್ರದೇಶದ ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !