ಚಂದ್ರಾಣಿ ಮುರ್ಮು ಅತಿ ಕಿರಿಯ ಸಂಸದೆ!

ಬುಧವಾರ, ಜೂನ್ 19, 2019
25 °C
ಒಡಿಶಾದ ಕ್ಯೊಂಜಾರ್ ಕ್ಷೇತ್ರದಿಂದ ಆಯ್ಕೆ; ಮೆಕ್ಯಾನಿಕಲ್‌ ಪದವೀಧರೆ

ಚಂದ್ರಾಣಿ ಮುರ್ಮು ಅತಿ ಕಿರಿಯ ಸಂಸದೆ!

Published:
Updated:
Prajavani

ಭುವನೇಶ್ವರ: ಕೆಲ ತಿಂಗಳ ಹಿಂದಿನವರೆಗೂ ಆಕೆ ಉದ್ಯೋಗದ ಹುಡುಕಾಟದಲ್ಲಿದ್ದರು. ಬ್ಯಾಂಕೊಂದರಲ್ಲಿ ಪ್ರೊಬೆಷನರಿ ಅಧಿಕಾರಿ ಅಥವಾ ಒಡಿಶಾ ಸರ್ಕಾರದಲ್ಲಿ ಉದ್ಯೋಗಿ ಆಗಬೇಕು ಎಂಬ ಗುರಿಯಷ್ಟೇ ಇತ್ತು.

ಮೆಕ್ಯಾನಿಕಲ್‌ ಎಂಜಿನಿಯರ್‌ ಪದವೀಧರೆಯಾಗಿದ್ದ ಆಕೆ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಲೋಕಸಭೆ ಚುನಾವಣೆ ಆಕೆಯ ಅದೃಷ್ಟ ಬದಲಿಸಿತು.

25 ವರ್ಷದ ‘ಚಂದ್ರಾಣಿ ಮುರ್ಮು’ ಈಗ ಲೋಕಸಭೆಯಲ್ಲಿ ಅತಿ ಕಿರಿಯ ಸಂಸದೆ. ಒಡಿಶಾದ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ ಕ್ಯೊಂಜಾರ್‌ನಿಂದ ಬಿಜೆಡಿಯ  ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಎರಡು ಬಾರಿಯ ಸಂಸದ, ಬಿಜೆಪಿಯ ಅನಂತ ನಾಯಕ್‌ ವಿರುದ್ಧ 66,203 ಮತಗಳ ಅಂತರದಿಂದ ಗೆದ್ದಿದ್ದಾರೆ.

ಶೇ 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನೀಡಬೇಕು ಎಂದುಕೊಂಡಿದ್ದ ಪ್ರಾದೇಶಿಕ ಪಕ್ಷವಾದ ಬಿಜೆಡಿಯು, ಸಾರ್ವಜನಿಕ ಜೀವನ ಪ್ರವೇಶಿಸಲು ಬಯಸುವ, ವಿದ್ಯಾವಂತ ಅಭ್ಯರ್ಥಿಯ ಹುಡುಕಾಟದಲ್ಲಿತ್ತು. ಈ ಅವಕಾಶವನ್ನು ಮುರ್ಮು ಬಳಸಿಕೊಂಡರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 23

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !