ಚಂದ್ರಯಾನ2: ಇಂದು ಶ್ರೀಹರಿಕೋಟ ತಲುಪಲಿರುವ ವಿಕ್ರಮ್ ಲ್ಯಾಂಡರ್, ಪ್ರಜ್ಞ್ಯಾ ರೋವರ್

ಭಾನುವಾರ, ಜೂಲೈ 21, 2019
22 °C

ಚಂದ್ರಯಾನ2: ಇಂದು ಶ್ರೀಹರಿಕೋಟ ತಲುಪಲಿರುವ ವಿಕ್ರಮ್ ಲ್ಯಾಂಡರ್, ಪ್ರಜ್ಞ್ಯಾ ರೋವರ್

Published:
Updated:

ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆಯ ಭಾಗವಾಗಿರುವ ಆರ್ಬಿಟರ್‌ ಇದೇ ಜೂನ್ 15ರಂದು ಉಡಾವಣಾ ಕೇಂದ್ರ ಶ್ರೀಹರಿಕೋಟವನ್ನು ತಲುಪಿದೆ. 

ಇದೇ ಯೋಜನೆಯ ವಿಕ್ರಮ್ ಲ್ಯಾಂಡರ್ (ಪ್ರಜ್ಞ್ಯಾ ರೋವರ್ ) ಅನ್ನು ನಿನ್ನೆ ಬೆಂಗಳೂರಿನಿಂದ ಕಳುಹಿಸಲಾ. ಇಂದು ವಿಕ್ರಮ್ ಲ್ಯಾಂಡರ್ ಶ್ರೀಹರಿಕೋಟವನ್ನು ತಲುಪಲಿದೆ ಎಂದೆ ಇಸ್ರೋ ಟ್ವೀಟ್ ಮಾಡಿದೆ.

ನಿನ್ನೆ ಸರ್ಕಾರಿ ಟ್ರಕ್‌ನಲ್ಲಿ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞ್ಯಾ ರೋವರ್ ಅನ್ನು ಕಳುಹಿಸಿಕೊಡಲಾಯಿತು. 

ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರದಲ್ಲಿ ಈ ಸಾಧನಗಳನ್ನು ತಯಾರು ಮಾಡಲಾಗಿದೆ. ಇಸ್ರೋ ಕಳೆದ ಬುಧವಾರ ಇವುಗಳನ್ನು ಪ್ರದರ್ಶನ ಮಾಡಿ ಪತ್ರಿಕಾಗೋಷ್ಠಿ ನಡೆಸಿತ್ತು. 

ಜುಲೈ ಮೊದಲ ವಾರ ಚಂದ್ರಯಾನ -2 ಯೋಜನೆಯಂತೆ ಭೂಸ್ಥಿರ ಉಡಾವಣಾ ವಾಹಕವು ಈ ಸಾಧನಗಳನ್ನು ಹೊತ್ತು ನಭಕ್ಕೆ ನೆಗೆಯಲಿದೆ. ಸೆಪ್ಟೆಂಬರ್‌ ವೇಳೆಗೆ ಆರ್ಬಿಟರ್‌ ಚಂದ್ರನ ಆವರಣ ತಲುಪಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !